ವಿದ್ಯುತ್ ತಂತಿ ತುಂಡಾಗಿ ಹಠಾತ್ ನಿಂತ ರೈಲು: ಇಬ್ಬರು ಸಾವು

ಜಾರ್ಖಂಡ್‌ ನ ಕೊಡೆರ್ಮಾ ಜಿಲ್ಲೆಯಲ್ಲಿ ಓವರ್‌ ಹೆಡ್ ವಿದ್ಯುತ್ ತಂತಿ ತುಂಡಾಗಿ ದೆಹಲಿಗೆ ಹೋಗುವ ರೈಲು ನಿಂತಿದ್ದರಿಂದ ಹಠಾತ್ ಜೊಲ್ಟ್‌ ನಿಂದ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಪೂರ್ವ ಕೇಂದ್ರ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪುರಿ-ನವದೆಹಲಿ ಪುರುಷೋತ್ತಮ್ ಎಕ್ಸ್‌ ಪ್ರೆಸ್‌ ನ ಚಾಲಕ ಓವರ್‌ಹೆಡ್ ವಿದ್ಯುತ್ ತಂತಿಯ ಮೇಲೆ ಬಿದ್ದ ನಂತರ ರೈಲನ್ನು ನಿಲ್ಲಿಸಲು ತುರ್ತು ಬ್ರೇಕ್ ಹಾಕಿದ್ದರಿಂದ ಗೋಮೊಹ್ ಮತ್ತು ಕೊಡರ್ಮಾ ರೈಲು ನಿಲ್ದಾಣಗಳ ನಡುವಿನ ಪರ್ಸಾಬಾದ್ ಬಳಿ ಅಪಘಾತ ಸಂಭವಿಸಿದೆ.

ವಿದ್ಯುತ್ ಸರಬರಾಜು ಇದ್ದಕ್ಕಿದ್ದಂತೆ ಸ್ಥಗಿತಗೊಂಡಿದ್ದರಿಂದ ರೈಲು ನಿಲ್ಲಿಸಲು ತುರ್ತು ಬ್ರೇಕ್ ಹಾಕಲಾಯಿತು. ಈ ವೇಳೆ ಜರ್ಕ್‌ನಿಂದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಧನ್‌ಬಾದ್ ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅಮರೇಶ್ ಕುಮಾರ್ ತಿಳಿಸಿದ್ದಾರೆ.

ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿತ್ತು. ಇಸಿಆರ್‌ನ ಧನ್‌ಬಾದ್ ರೈಲ್ವೆ ವಿಭಾಗದ ಅಡಿಯಲ್ಲಿ ಗ್ರ್ಯಾಂಡ್ ಕಾರ್ಡ್ ಲೈನ್‌ನಲ್ಲಿ ರೈಲು ಸಂಚಾರವು ಕೊಡರ್ಮಾ-ಗೊಮೊಹ್ ವಿಭಾಗದಲ್ಲಿ ಅಪಘಾತದ ನಂತರ ನಾಲ್ಕು ಗಂಟೆಗಳ ಕಾಲ ಸ್ಥಗಿತಗೊಂಡ ನಂತರ ಪುನರಾರಂಭವಾಯಿತು.

ಪುರುಷೋತ್ತಮ್ ಎಕ್ಸ್‌ಪ್ರೆಸ್ ಅನ್ನು ಅಪಘಾತ ಸ್ಥಳದಿಂದ ಡೀಸೆಲ್ ಎಂಜಿನ್ ಮೂಲಕ ಗೋಮೊಹ್‌ಗೆ ತರಲಾಯಿತು. ಎಲೆಕ್ಟ್ರಿಕ್ ಎಂಜಿನ್ ಮೂಲಕ ದೆಹಲಿಗೆ ಕಳುಹಿಸಲಾಯಿತು.

ಮಾಹಿತಿ ಪಡೆದ ಧನ್‌ಬಾದ್ ರೈಲ್ವೆ ವಿಭಾಗದ ವ್ಯವಸ್ಥಾಪಕ ಕೆ.ಕೆ. ಸಿನ್ಹಾ ಅವರು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read