HomeIndiaBIG BREAKING: ಬಿಜೆಪಿ ಸೇರ್ಪಡೆ ವದಂತಿಗೆ ತೆರೆ ಎಳೆದ ಚಂಪೈ ಸೊರೇನ್; ಹೊಸ ಪಕ್ಷ ಸ್ಥಾಪನೆಯ...

BIG BREAKING: ಬಿಜೆಪಿ ಸೇರ್ಪಡೆ ವದಂತಿಗೆ ತೆರೆ ಎಳೆದ ಚಂಪೈ ಸೊರೇನ್; ಹೊಸ ಪಕ್ಷ ಸ್ಥಾಪನೆಯ ಘೋಷಣೆ

ಇತ್ತೀಚೆಗಷ್ಟೇ ಮಾತೃ ಪಕ್ಷ ಜಾರ್ಖಂಡ್ ಮುಕ್ತಿ ಮೋರ್ಚಾ ತೊರೆದಿದ್ದ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್, ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬ ವದಂತಿಗಳಿಗೆ ತೆರೆ ಎಳೆದು ಹೊಸ ಪಕ್ಷ ಸ್ಥಾಪನೆಯ ಘೋಷಣೆ ಮಾಡಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಮುಂದೆ ಮೂರು ಆಯ್ಕೆಗಳಿದ್ದವು. ಆದರೆ ಮುಂಬರುವ ಜಾರ್ಖಂಡ್ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

ನಾನು ಪಕ್ಷ ತೊರೆದಾಗ ನಿವೃತ್ತಿ, ಪಕ್ಷ ಸ್ಥಾಪನೆ ಅಥವಾ ಮಿತ್ರರ ಜೊತೆ ಸೇರ್ಪಡೆ ಈ ಮೂರು ಆಯ್ಕೆಗಳಿದ್ದವು. ಇದೀಗ ಹೊಸ ಪಕ್ಷ ಸ್ಥಾಪನೆಗೆ ತೀರ್ಮಾನ ಕೈಗೊಂಡಿದ್ದು, ಮುಂಬರುವ ದಿನಗಳಲ್ಲಿ ನಮ್ಮೊಂದಿಗೆ ಯಾರಾದರೂ ಕೈಜೋಡಿಸಲು ಬಂದರೆ ಸಾಥ್ ನೀಡುವುದಾಗಿ ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular