ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಜಂಗಲ್‌ಮಹಲ್ ಭಾಗದ ಜಾರ್‌ಗ್ರಾಮ್ ಜಿಲ್ಲೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡುವ ಮುನ್ಸೂಚನೆ ನೀಡಿದೆ. ವಿಶೇಷವೆಂದರೆ, ಈ ಭರ್ಜರಿ ಮುನ್ನಡೆಗೆ ಪ್ರಧಾನಿ ನರೇಂದ್ರ ಮೋದಿಯವರ ಚುರುಮುರಿ ಪ್ರಚಾರವೇ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ
ಏನಿದು ಝಲ್ ಮುರಿ ಮ್ಯಾಜಿಕ್?
ಕಳೆದ ಏಪ್ರಿಲ್ 19ರಂದು ಪ್ರಧಾನಿ ಮೋದಿ ಅವರು ಜಾರ್‌ಗ್ರಾಮ್‌ನಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಇದ್ದಕ್ಕಿದ್ದಂತೆ ವಾಹನ ನಿಲ್ಲಿಸಿ ರಸ್ತೆ ಬದಿಯ ವ್ಯಾಪಾರಿ ಬಿಕ್ರಮ್ ಸೌ ಎಂಬುವವರಿಂದ 10 ರೂಪಾಯಿ ನೀಡಿ ಝಲ್ ಮುರಿ (ಚುರುಮುರಿ) ಖರೀದಿಸಿ ಸವಿದಿದ್ದರು.
ಸಾಮಾನ್ಯ ಜನರಂತೆ ರಸ್ತೆ ಬದಿಯಲ್ಲಿ ನಿಂತು ತಿಂಡಿ ತಿಂದ ಮೋದಿಯವರ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿತ್ತು.ಈ ಸಾಧಾರಣ ನಡೆ ಸ್ಥಳೀಯ ಬುಡಕಟ್ಟು ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾದಂತೆ ತೋರುತ್ತಿದೆ.
ಜಾರ್‌ಗ್ರಾಮ್‌ನಲ್ಲಿ ಬಿಜೆಪಿ ದಿಗ್ವಿಜಯ
ಬೆಳಗ್ಗೆ 10 ಗಂಟೆಯ ಟ್ರೆಂಡ್ ಪ್ರಕಾರ ಜಾರ್‌ಗ್ರಾಮ್ ಜಿಲ್ಲೆಯ ಎಲ್ಲಾ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಸ್ಥಳೀಯರೊಂದಿಗಿನ ಮೋದಿಯವರ ಒಡನಾಟ ಮತ್ತು ಸರಳತೆ ಈ ಭಾಗದಲ್ಲಿ ಬಿಜೆಪಿಗೆ ದೊಡ್ಡ ಬಲ ತಂದುಕೊಟ್ಟಿದೆ.ಕಳೆದ ಬಾರಿ ಇಲ್ಲಿ ಹಿನ್ನಡೆ ಅನುಭವಿಸಿದ್ದ ಕಮಲ ಪಡೆ, ಈ ಬಾರಿ ಮಮತಾ ಬ್ಯಾನರ್ಜಿ ಕೋಟೆಗೆ ಲಗ್ಗೆ ಇಟ್ಟಿದೆ.
ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ದಾಟಿದ ಬಿಜೆಪಿ
ಜಾರ್‌ಗ್ರಾಮ್ ಮಾತ್ರವಲ್ಲದೆ ಇಡೀ ಬಂಗಾಳದಲ್ಲಿ ಬಿಜೆಪಿ ಅಲೆ ಎದ್ದಿದ್ದು, ಅಧಿಕಾರದ ಗದ್ದುಗೆಯತ್ತ ದಾಪುಗಾಲು ಹಾಕುತ್ತಿದೆ:
ಬಿಜೆಪಿ: 168 (ಬಹುಮತಕ್ಕೆ 148 ಬೇಕು)
ಟಿಎಂಸಿ: 112
ಕಾಂಗ್ರೆಸ್: 03
ಇತರರು: 04

