ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಮತ್ತು ಪಾಕಿಸ್ತಾನದ ಆಲ್ ರೌಂಡರ್ ಫಾತಿಮಾ ಸನಾ ಪರಸ್ಪರ ಭೇಟಿಯಾಗಿ ಕರಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸದರ್ನ್ ಬ್ರೇವ್ಸ್ ಮತ್ತು ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡಗಳ ನಡುವಿನ ಪಂದ್ಯ ಮುಗಿದ ಬಳಿಕ ಉಭಯ ಆಟಗಾರ್ತಿಯರು ಮಾತನಾಡುತ್ತಾ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯಗಳು ಬೆಳಕಿಗೆ ಬಂದಿವೆ.
ಈ ಪಂದ್ಯದಲ್ಲಿ ಜೆಮಿಮಾ ಪ್ರತಿನಿಧಿಸುವ ಸದರ್ನ್ ಬ್ರೇವ್ಸ್ ತಂಡವು 24 ರನ್ ಗಳ ಜಯ ಸಾಧಿಸಿತು. ಮೊದಲು ಬ್ಯಾಟ್ ಮಾಡಿದ ಬ್ರೇವ್ಸ್ ತಂಡ ನಿಗದಿತ ಎಸೆತಗಳಲ್ಲಿ 3 ವಿಕೆಟ್ ನಷ್ಟಕ್ಕೆ 140 ರನ್ ಕಲೆಹಾಕಿತು. ತಂಡದ ಪರ ಲಿಝೆಲ್ ലീ 43 ರನ್ ಹಾಗೂ ಮೈಯಾ ಬೌಚಿಯರ್ 45 ರನ್ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಜೆಮಿಮಾ ರೊಡ್ರಿಗಸ್ ಕೇವಲ 18 ಎಸೆತಗಳಲ್ಲಿ ಅಜೇಯ 28 ರನ್ ಗಳಿಸಿ ತಂಡದ ಮೊತ್ತ ಹೆಚ್ಚಿಸಿದರು. ಫೀನಿಕ್ಸ್ ಪರ ಬೌಲಿಂಗ್ ಮಾಡಿದ ಫಾತಿಮಾ ಸನಾ 15 ಎಸೆತಗಳಲ್ಲಿ 33 ರನ್ ನೀಡಿ ದುಬಾರಿಯಾದರು.
141 ರನ್ ಗಳ ಗುರಿ ಬೆನ್ನಟ್ಟಿದ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡಕ್ಕೆ ತಮ್ಮಿ ಬ್ಯೂಮಾಂಟ್ ಮತ್ತು ಡವಿನಾ ಪೆರಿನ್ ಮೊದಲ ವಿಕೆಟ್ ಗೆ 73 ರನ್ ಗಳ ಜತೆಯಾಟವಾಡಿ ಬಿರುಸಿನ ಆರಂಭ ನೀಡಿದರು. ಪೆರಿನ್ 52 ರನ್ ಬಾರಿಸಿ ಮಿಂಚಿದರೆ ಬ್ಯೂಮಾಂಟ್ 22 ರನ್ ಕೊಡುಗೆ ನೀಡಿದರು. ಆದರೆ ಈ ಇಬ್ಬರು ಔಟಾದ ನಂತರ ಪಂದ್ಯದ ಚಿತ್ರಣವೇ ಬದಲಾಯಿತು.
ಸದರ್ನ್ ಬ್ರೇವ್ಸ್ ಬೌಲರ್ ಗಳಾದ ಸಾರಾ ಗ್ಲೆನ್, ಲಾರೆನ್ ಬೆಲ್ ಮತ್ತು ಸೋಫಿ ಮೊಲಿನುಕ್ಸ್ ನಿಖರ ದಾಳಿ ನಡೆಸಿ ಎದುರಾಳಿ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಅಂತಿಮವಾಗಿ ಫೀನಿಕ್ಸ್ ತಂಡ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗೆಲುವಿನೊಂದಿಗೆ ಸದರ್ನ್ ಬ್ರೇವ್ಸ್ ತಂಡ ಟೂರ್ನಿಯಲ್ಲಿ ತನ್ನ ಸತತ ನಾಲ್ಕನೇ ಜಯ ದಾಖಲಿಸಿದರೆ, ಫೀನಿಕ್ಸ್ ತಂಡ ಇನ್ನು ಕೂಡ ಮೊದಲ ಗೆಲುವಿನ ಹುಡುಕಾಟದಲ್ಲಿದೆ.
Everyone debating if Fatima Sana and jemimah Rodrigues would shake hands and they straight up HUGGED?!😭😭🙏
Keep politics out of sports FOREVER. pic.twitter.com/XCE2lswGlg
— A. (@anhnjo) July 30, 2026

