HomeKarnatakaಜೆಡಿಎಸ್ ಮುಖಂಡನಿಂದ ಗೂಂಡಾಗಿರಿ: ಟ್ರಾಫಿಕ್ ಪೊಲೀಸ್ ಕೊರಳ ಪಟ್ಟಿ ಹಿಡಿದು, ಹಲ್ಲೆಗೆ ಯತ್ನ: ಕಾಲಿನಿಂದ ಒದ್ದು...

ಜೆಡಿಎಸ್ ಮುಖಂಡನಿಂದ ಗೂಂಡಾಗಿರಿ: ಟ್ರಾಫಿಕ್ ಪೊಲೀಸ್ ಕೊರಳ ಪಟ್ಟಿ ಹಿಡಿದು, ಹಲ್ಲೆಗೆ ಯತ್ನ: ಕಾಲಿನಿಂದ ಒದ್ದು ದರ್ಪ: ಆರೋಪಿ ಅರೆಸ್ಟ್

ಬೆಂಗಳೂರು: ಜೆಡಿಎಸ್ ಮುಖಂಡರೊಬ್ಬರು ಬೆಂಗಳೂರಿನಲ್ಲಿ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನ‌ ನಡೆಸಿದ್ದಲ್ಲದೇ ಕಾಲಿನಿಂದ ಒದ್ದು ದರ್ಪ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

ಜೆಡಿಎಸ್‌ ಮುಖಂಡ ಗೊಟ್ಟಿಗೆರೆ ಮಂಜುನಾಥ್ ಎಂಬುವವರು ನಡುರಸ್ತೆಯಲ್ಲಿ ಟ್ರಾಫಿಕ್ ಪೊಲೀಸ್ ಕಾನ್ಸ್ ಟೇಬಲ್ ಕೊರಳ ಪಟ್ತಿ ಹಿಡಿದು ಹಲ್ಲೆ ನಡೆಸಲು ಯತ್ನಿಸಿದ್ದಲ್ಲದೇ ಪೊಲೀಸ್ ಸಿಬ್ಬಂದಿಯನ್ನು ಎಳೆದಾಡಿದ್ದಾರೆ. ಅಲ್ಲದೇ ಕಾಲಿನಿಂದ ಒದ್ದು ಆವಾಜ್ ಹಾಕಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಳಿಮಾವು ಟ್ರಾಫಿಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಖಾಸಗಿ ಹೋಟೆಲ್‌ನಲ್ಲಿ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜುನಾಥ್ ನನ್ನು ಬಂಧಿಸಿದ್ದಾರೆ.

ಅರುಣ್ ಎಂಬ ಟ್ರಾಫಿಕ್ ಸಿಬ್ಬಂದಿ ಮೇಲೆ ಹಲ್ಲೆಗೆ ಮಂಜುನಾಥ್ ಅವರು ಯತ್ನಿಸಿದ್ದರು. ಸಿಬ್ಬಂದಿ ಜೊತೆ ಜಗಳ ಮಾಡುತ್ತಿದ್ದ ವೀಡಿಯೋ ವೈರಲ್ ಆಗಿದೆ. ಈ ಸಂಬಂಧ ಮಂಜುನಾಥ್ ಅವರ ವಿರುದ್ಧ ಟ್ರಾಫಿಕ್‌ ಸಿಬ್ಬಂದಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಗೊಟ್ಟಿಗೆರೆಯಲ್ಲಿ ನಿನ್ನೆ ಟ್ರಾಫಿಕ್ ಜಾಮ್ ಆಗಿತ್ತು. ಈ ವೇಳೆ ಕರ್ತವ್ಯದಲ್ಲಿದ್ದ ಅರುಣ್ ಎಂಬ ಸಿಬ್ಬಂದಿ ಜೆಡಿಎಸ್ ಮುಖಂಡ ಗೊಟ್ಟಿಗೆರೆ ಮಂಜುನಾಥ್ ಬರ್ತಿದ್ದ ಕಾರನ್ನು ತಡೆದಿದ್ದರು. ಕಾರು ತಡೆದಿದ್ದಕ್ಕೆ ಕೋಪಗೊಂಡ ಗೊಟ್ಟಿಗೆರೆ ಮಂಜುನಾಥ್ ಕಾರಿನಿಂದ ಇಳಿದು ಅವಾಚ್ಯವಾಗಿ ಸಿಬ್ಬಂದಿಗೆ ಬೈದಿದ್ದಾರೆ. ಅಷ್ಟೇ ಅಲ್ಲದೇ, ಸಾರ್ವಜನಿಕವಾಗಿ ಪೊಲೀಸ್ ಸಿಬ್ಬಂದಿ ಕೊರಳ ಪಟ್ಟಿ ಹಿಡಿದೆಳೆದಾಡುತ್ತ ಹಲ್ಲೆಗೆ ಯತ್ನಿಸಿದ್ದಾರೆ.

ನೀನು ಇಲ್ಲಿ ಅದ್ಹೇಗೆ ಕೆಲಸ ಮಾಡ್ತೀಯಾ ನಾನು‌ ನೋಡ್ತಿನಿ ಅಂತಾ ಸಿಬ್ಬಂದಿಯನ್ನು ತಳ್ಳಿ, ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಸದ್ಯ ಜೆಡಿಎಸ್ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular