HomeKarnatakaBIG NEWS: ಹೆಚ್.ಡಿ.ಕೆಗೆ ಬಿಗ್ ಶಾಕ್: ಜೆಡಿಎಸ್ ನ 300 ಕಾರ್ಯಕರ್ತರು ದಿಢೀರ್ ಕಾಂಗ್ರೆಸ್ ಸೇರ್ಪಡೆ

BIG NEWS: ಹೆಚ್.ಡಿ.ಕೆಗೆ ಬಿಗ್ ಶಾಕ್: ಜೆಡಿಎಸ್ ನ 300 ಕಾರ್ಯಕರ್ತರು ದಿಢೀರ್ ಕಾಂಗ್ರೆಸ್ ಸೇರ್ಪಡೆ

ರಾಮನಗರ: ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಡಿಸಿಎಂ ಡಿ.ಕೆ.ಶಿವಕುಮಾರ್ ಆಪರೇಷನ್ ಹಸ್ತ ಆರಂಭಿಸಿದ್ದು, ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರನ್ನು ಕಾಂಗ್ರೆಸ್ ಗೆ ಬರಮಾಡಿಕೊಳ್ಳುತ್ತಿದ್ದಾರೆ.

ಚನ್ನಪಟ್ಟಣ, ಮಾಗಡಿ, ಆನೇಕಲ್, ಕುಣಿಗಲ್ ಭಾಗದ ಜೆಡಿಎಸ್ ನ 300ಕ್ಕೂ ಹೆಚ್ಚು ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ. ಎಲ್ಲರಿಗೂ ಕಾಂಗ್ರೆಸ್ ಶಾಲು ಹೊದಿಸಿ ಸ್ವತಃ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಗೆ ಬರಮಾಡಿಕೊಂಡಿದ್ದಾರೆ.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕೆಲ ದಿನಗಳಿಂದ ಬೇರೆ ಬೇರೆ ಪಕ್ಷದ ಮುಖಂಡರು ಕಾಂಗ್ರೆಸ್ ಸೇರುತ್ತಲೇ ಇದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇರದ ಬೇರೆ ಬೇರೆ ಭಾಗದವರು ಸುಮಾರು 5000 ಮುಖಂಡರು ಕಾಂಗ್ರೆಸ್ ಗೆ ಬಂದಿದ್ದಾರೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular