HomeKarnatakaJDS ಅಭ್ಯರ್ಥಿ ಆಯ್ಕೆಯಲ್ಲಿ ದೇವೇಗೌಡರೇ ಫೈನಲ್; ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲುವು ಖಚಿತ; ಚಿಕ್ಕಪ್ಪನಿಗೆ ಟಾಂಗ್...

JDS ಅಭ್ಯರ್ಥಿ ಆಯ್ಕೆಯಲ್ಲಿ ದೇವೇಗೌಡರೇ ಫೈನಲ್; ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಗೆಲುವು ಖಚಿತ; ಚಿಕ್ಕಪ್ಪನಿಗೆ ಟಾಂಗ್ ನೀಡಿದ ಸೂರಜ್ ರೇವಣ್ಣ

ಹಾಸನ: ಹಾಸನ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರ ದಿನದಿಂದ ದಿನಕ್ಕೆ ಕುತೂಹಲ ಪಡೆದುಕೊಳ್ಳುತ್ತಿದ್ದು, ಹಾಸನದಿಂದ ಭವಾನಿ ರೇವಣ್ಣ ಸ್ಪರ್ಧಿಸಿದರೆ ಗೆಲುವು ಖಚಿತ ಎಂದು ಪುತ್ರ, ಎಂ ಎಲ್ ಸಿ ಸೂರಜ್ ರೇವಣ್ಣ ತಿಳಿಸಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂರಜ್ ರೇವಣ್ಣ, ಜೆಡಿಎಸ್ ನಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ದೇವೇಗೌಡರೇ ಫೈನಲ್. ಹಿಂದಿನಿಂದಲೂ ನಮ್ಮ ತಾತ ಅವ್ರೇ ಅಭ್ಯರ್ಥಿ ಆಯ್ಕೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಚಿಕ್ಕಪ್ಪ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕು ಎಂಬುದನ್ನು ಹೆಚ್.ಡಿ. ದೇವೇಗೌದರು ನಿರ್ಧಾರ ಮಾಡ್ತಾರೆ. ನನ್ನನ್ನು ಎಂ ಎಲ್ ಸಿ ಚುನಾವಣೆಗೆ ಅಭ್ಯರ್ಥಿ ಮಾಡಿದ್ದು ದೇವೇಗೌಡ್ರು, ಹಾಸನ ಎಂಪಿ ಚುನಾವಣೆಯಲ್ಲಿ ಪ್ರಜ್ವಲ್ ಗೆ ಟಿಕೆಟ್ ಕೊಟ್ಟವರು ಅವರೇ. ಮುಂದೆಯೂ ಯಾರು ಎಲ್ಲಿಂದ ಸ್ಪರ್ಧೆ ಎಂಬುದನ್ನು ಹೆಚ್ ಡಿ ಡಿ ಅವರೇ ತೀರ್ಮಾನಿಸುತ್ತಾರೆ. ಭವಾನಿ ರೇವಣ್ಣ ಅಭ್ಯರ್ಥಿಯಾದರೆ ಹಾಸನದಲ್ಲಿ ಗೆಲುವು ಖಚಿತ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular