HomeEntertainment‌ʼಜವಾನ್‌ʼ ಯಶಸ್ಸಿನ ಬೆನ್ನಲ್ಲೇ ಶಾರೂಖ್‌ ಖಾನ್‌ ಹಳೆ ವಿಡಿಯೋ ವೈರಲ್

‌ʼಜವಾನ್‌ʼ ಯಶಸ್ಸಿನ ಬೆನ್ನಲ್ಲೇ ಶಾರೂಖ್‌ ಖಾನ್‌ ಹಳೆ ವಿಡಿಯೋ ವೈರಲ್

ಶಾರುಖ್ ಖಾನ್ ಅಭಿನಯದ ಜವಾನ್ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಶಾರುಖ್ ಖಾನ್ ಅವರನ್ನು ಯಂಗ್ ಮತ್ತು ವಯಸ್ಸಾದವರಂತೆ ಚಿತ್ರಿಸಿರುವ ಈ ಸಿನಿಮಾ ಕೇವಲ ಐದು ದಿನಗಳಲ್ಲಿ 300 ಕೋಟಿ ರೂ. ಕ್ಲಬ್ ಗೆ ಸೇರಿದೆ. ಈ ನಡುವೆ ಶಾರುಖ್ ಖಾನ್ ಅವರ ಹಳೆಯ ವಿಡಿಯೋವೊಂದು ರೆಡ್ಡಿಟ್ ನಲ್ಲಿ ವೈರಲ್ ಆಗಿದೆ.

ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾರುಖ್ ಖಾನ್, ನಾನು ವಯಸ್ಸಾದ, ಶಾಂತ ವ್ಯಕ್ತಿಯಂತೆ ತೆರೆ ಮೇಲೆ ಅಭಿನಯಿಸಲು ಇಷ್ಟಪಡುತ್ತೇನೆ. ಬೂದು ಗಡ್ಡ, ಬೂದು ತಲೆಗೂದಲನ್ನು ಹೊಂದಿರುವ ವೃದ್ಧ ವ್ಯಕ್ತಿಯಂತೆ ಅಭಿನಯಿಸಲು ತಾನು ಬಯಸುವುದಾಗಿ ಹೇಳಿದ್ದಾರೆ.

ನಾನು ರಾತ್ರಿಯಲ್ಲಿ ಬ್ಯಾಟ್‌ಮ್ಯಾನ್, ಬೆಳಿಗ್ಗೆ ಸೂಪರ್‌ಮ್ಯಾನ್, ಮಧ್ಯಾಹ್ನ ಸ್ಪೈಡರ್ ಮ್ಯಾನ್ ಹೀಗೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ಬಯಸುತ್ತೇನೆ ಎಂದು ಹೇಳಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುತೂಹಲಕಾರಿಯಾಗಿ, ಜವಾನ್ ಸಿನಿಮಾದಲ್ಲಿ ಶಾರುಖ್ ಖಾನ್ ಬೂದು ಗಡ್ಡವನ್ನು ಹೊಂದಿರುವ ವಿಕ್ರಮ್ ಎಂಬ ವಯಸ್ಸಾದ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿನ ಶಾರುಖ್ ಅವರ ಲುಕ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.

ಸೆಪ್ಟೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರದಲ್ಲಿ ನಯನತಾರಾ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತು ಸಂಜಯ್ ದತ್ ಅವರು ಕೂಡ ವಿಶೇಷ ಪಾತ್ರಧಾರಿಗಳಾಗಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಸನ್ಯಾ ಮಲ್ಹೋತ್ರಾ, ಪ್ರಿಯಾಮಣಿ, ಗಿರಿಜಾ ಓಕ್, ಸಂಜೀತಾ ಭಟ್ಟಾಚಾರ್ಯ, ಲೆಹರ್ ಖಾನ್, ಆಲಿಯಾ ಖುರೇಷಿ, ರಿಧಿ ಡೋಗ್ರಾ ಮತ್ತು ಸುನಿಲ್ ಗ್ರೋವರ್ ಕೂಡ ನಟಿಸಿದ್ದಾರೆ.

ಇನ್ನು ರಾಜ್‌ಕುಮಾರ್ ಹಿರಾನಿ ನಿರ್ದೇಶನದ ಡುಂಕಿ ಚಿತ್ರದಲ್ಲಿ ಶಾರುಖ್ ನಟಿಸಲಿದ್ದಾರೆ. ತಾಪ್ಸಿ ಪನ್ನು ಕೂಡ ನಟಿಸಿರುವ ಈ ಚಿತ್ರ ಡಿಸೆಂಬರ್ 22 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

"wanna play an older, quiet guy who is very intense with grey beard and hair" – Shah Rukh Khan hinted us about Vikram Rathore in Jawan way back in 2022
byu/Dwight_Kramer inBollyBlindsNGossip

For Latest News Updates, Join Our Whatsapp Community🚩
RELATED ARTICLES

Most Popular