HomeEntertainmentವಾರಾಂತ್ಯ ಗಳಿಕೆಯಲ್ಲೂ ಶಾರುಖ್ ಖಾನ್ ‘ಜವಾನ್’ ಹೊಸ ದಾಖಲೆ: ಮೊದಲ ವಾರಾಂತ್ಯದಲ್ಲೇ 520 ಕೋಟಿ ರೂ....

ವಾರಾಂತ್ಯ ಗಳಿಕೆಯಲ್ಲೂ ಶಾರುಖ್ ಖಾನ್ ‘ಜವಾನ್’ ಹೊಸ ದಾಖಲೆ: ಮೊದಲ ವಾರಾಂತ್ಯದಲ್ಲೇ 520 ಕೋಟಿ ರೂ. ಕಲೆಕ್ಷನ್

ನವದೆಹಲಿ: ಶಾರುಖ್ ಖಾನ್ ಅಭಿನಯದ ‘ಜವಾನ್’ ಬಾಕ್ಸ್ ಆಫೀಸ್ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದೆ. ದಿನದಿಂದ ದಿನಕ್ಕೆ ಚಿತ್ರ ಯಶಸ್ಸಿನ ದಾಖಲೆ ಸೃಷ್ಟಿಸುತ್ತಿದೆ. ಚಿತ್ರವು ನಿರಂತರವಾಗಿ ಭಾರಿ ಕಲೆಕ್ಷನ್ ಮಾಡುತ್ತಿದ್ದು, ಮೊದಲ ವಾರಾಂತ್ಯದಲ್ಲಿಯೇ 500 ಕೋಟಿ ರೂ. ಗಡಿ ದಾಟಿದೆ. ಈ ಚಿತ್ರವು ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 520.79 ಕೋಟಿ ಒಟ್ಟು ಕಲೆಕ್ಷನ್ ಮಾಡಿದೆ.

‘ಜವಾನ್’ 4ನೇ ದಿನದಂದು ಬಾಕ್ಸ್ ಆಫೀಸ್‌ ನಲ್ಲಿ ಹಿಂದಿಯಲ್ಲಿ 71.63 ಕೋಟಿ ಮತ್ತು ಇತರೆ ಭಾಷೆಗಳಲ್ಲಿ 8.47 ಕೋಟಿ ರೂ. ಸೇರಿ 80.10 ಕೋಟಿ ಗಳಿಸಿದೆ. ಚಿತ್ರವು ವಾರಾಂತ್ಯದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿ ಚಿತ್ರರಂಗಕ್ಕೆ ಹೊಸ ಮಾನದಂಡಗಳನ್ನು ಸೃಷ್ಟಿಸುವ ಹಾದಿಯಲ್ಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಜವಾನ್’ ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಿಯಾಗಿದ್ದು, ಅಟ್ಲೀ ನಿರ್ದೇಶಿಸಿದ್ದಾರೆ, ಗೌರಿ ಖಾನ್ ನಿರ್ಮಿಸಿದ್ದಾರೆ ಮತ್ತು ಗೌರವ್ ವರ್ಮಾ ಸಹ-ನಿರ್ಮಾಣ ಮಾಡಿದ್ದಾರೆ. ಚಲನಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಸೆಪ್ಟೆಂಬರ್ 7, 2023 ರಂದು ವಿಶ್ವಾದ್ಯಂತ ಬಿಡುಗಡೆಯಾಯಿತು. ಬಿಡುಗಡೆಯಾದ ದಿನದಿಂದಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular