ಬೆಂಗಳೂರು: ಇಂದಿನ ವೇಗದ ಜೀವನಶೈಲಿಯಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯು (Stroke) ಸಾವುಗಳಿಗೆ ಪ್ರಮುಖ ಕಾರಣವಾಗುತ್ತಿವೆ. ಮೆದುಳಿಗೆ ರಕ್ತ ಸಂಚಾರ ದಿಢೀರ್ ಸ್ಥಗಿತಗೊಂಡಾಗ ಪಾರ್ಶ್ವವಾಯು ಸಂಭವಿಸುತ್ತದೆ. ಆದರೆ, ಜಪಾನಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬಳಸುವ ಒಂದು ಸಾಂಪ್ರದಾಯಿಕ ವಿಧಾನ ಈಗ ವಿಶ್ವದ ಗಮನ ಸೆಳೆಯುತ್ತಿದೆ.
ಜಪಾನ್ ದೇಶದ ಒಂದು ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕ ಅಭ್ಯಾಸವು ಪಾರ್ಶ್ವವಾಯು (Stroke) ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎಂಬುದು ಸಾಬೀತಾಗಿದೆ. ಪ್ರತಿದಿನ ಕೇವಲ 15 ನಿಮಿಷ ಈ ಕ್ರಮವನ್ನು ಅನುಸರಿಸುವುದರಿಂದ 50 ವರ್ಷ ಮೇಲ್ಪಟ್ಟವರಿಗೆ ಹೆಚ್ಚಿನ ಲಾಭ ಸಿಗಲಿದೆ.ಪೌಷ್ಟಿಕತಜ್ಞೆ ಶ್ವೇತಾ ಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವಂತೆ ಜಪಾನಿಯರು ತಮ್ಮ ದಿನನಿತ್ಯದ ಆರೋಗ್ಯ ಕಾಪಾಡಿಕೊಳ್ಳಲು ಬಳಸುವ ಈ ಪುರಾತನ ಪದ್ಧತಿ ಈಗ ಜಗತ್ತಿನ ಗಮನ ಸೆಳೆಯುತ್ತಿದೆ.
https://www.instagram.com/reel/DSr8AQVk6TC/?utm_source=ig_web_copy_link
ಏನಿದು ಜಪಾನಿಯರ ಆರೋಗ್ಯ ರಹಸ್ಯ?
ಪೌಷ್ಟಿಕತಜ್ಞೆ ಶ್ವೇತಾ ಶಾ ಅವರ ಪ್ರಕಾರ, ಜಪಾನಿಯರು ಪ್ರತಿದಿನ 15-20 ನಿಮಿಷಗಳ ಕಾಲ ತಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ಅದ್ದಿ ಕುಳಿತುಕೊಳ್ಳುತ್ತಾರೆ (Foot Soaking). ವಿಶೇಷವಾಗಿ 50 ವರ್ಷ ದಾಟಿದವರಿಗೆ ಇದು ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
ಇದು ಹೇಗೆ ಸಹಕಾರಿ?
ರಕ್ತಪರಿಚಲನೆ: ಬಿಸಿ ನೀರು ರಕ್ತನಾಳಗಳನ್ನು ವಿಸ್ತರಿಸುತ್ತದೆ, ಇದರಿಂದ ರಕ್ತ ಸಂಚಾರ ಸರಾಗವಾಗಿ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ.
ಎಪ್ಸಮ್ ಸಾಲ್ಟ್ ಮ್ಯಾಜಿಕ್: ಈ ನೀರಿಗೆ ಸ್ವಲ್ಪ ಎಪ್ಸಮ್ ಸಾಲ್ಟ್ ಸೇರಿಸುವುದರಿಂದ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ನಿದ್ರಾಹೀನತೆ (Insomnia) ದೂರವಾಗಿ ನೆಮ್ಮದಿಯ ನಿದ್ರೆ ಬರುತ್ತದೆ.
ಪಾರ್ಶ್ವವಾಯುವಿನ ಮುನ್ಸೂಚನೆಗಳು: ಇರಲಿ ಎಚ್ಚರ
ಪಾರ್ಶ್ವವಾಯು ಸಂಭವಿಸುವ ಮುನ್ನ ದೇಹವು ಈ ಕೆಳಗಿನ ಸೂಚನೆಗಳನ್ನು ನೀಡುತ್ತದೆ:
ದಿಢೀರನೆ ದೇಹದ ಸಮತೋಲನ ತಪ್ಪುವುದು.
ಕಣ್ಣಿನ ದೃಷ್ಟಿ ಮಂಜಾಗುವುದು.
ಮುಖದ ಒಂದು ಭಾಗ ಜೋತು ಬೀಳುವುದು.
ಒಂದು ಕೈಯನ್ನು ಮೇಲೆತ್ತಲು ಸಾಧ್ಯವಾಗದೆ ಕೆಳಕ್ಕೆ ಜಾರುವುದು.
ಮಾತು ತೊದಲುವಿಕೆ ಅಥವಾ ಧ್ವನಿ ಬದಲಾಗುವುದು.
ಯಾರಿಗೆ ಅಪಾಯ ಹೆಚ್ಚು?
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು.
ಅತಿಯಾದ ಧೂಮಪಾನ ಮತ್ತು ಮದ್ಯಪಾನ ಮಾಡುವವರು.
ಆಗಾಗ್ಗೆ ತೀವ್ರ ತಲೆನೋವು ಅಥವಾ ಮೈಗ್ರೇನ್ ಇರುವವರು.
ಹೈ ಶುಗರ್ ಅಥವಾ ಟೈಪ್-2 ಮಧುಮೇಹ ಇರುವವರು.

