Rakshabandhan Video: ಪಾಪರಾಜಿಗೆ ‘ರಾಖಿ’ ಕಟ್ಟಿದ ಜಾಹ್ನವಿ; ಹಣ ನೀಡಲು ಬಂದಾಗ ನಿರಾಕರಣೆ

ಬಾಲಿವುಡ್ ನಟಿ ಜಾಹ್ನವಿ ಕಪೂರ್ ರಕ್ಷಾಬಂಧನ ದಿನದಂದು ಪಾಪರಾಜಿ (ಸೆಲೆಬ್ರಿಟಿಗಳ ಫೋಟೋ ಕ್ಲಿಕ್ಕಿಸುವ ಹವ್ಯಾಸಿ ಛಾಯಾಗ್ರಾಹಕರು) ಗೆ ರಾಖಿ ಕಟ್ಟಿದ್ದಾರೆ. ಈ ಸಂದರ್ಭದಲ್ಲಿ ರಾಖಿ ಕಟ್ಟಿಸಿಕೊಂಡ ಬಳಿಕ ಆತ ಹಣ ನೀಡಲು ಬಂದಾಗ ನಯವಾಗಿ ನಿರಾಕರಿಸಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈನ ಬಾಂದ್ರಾದಲ್ಲಿ ಈ ಘಟನೆ ನಡೆದಿದ್ದು, ಹೊರಗೆ ಹೋಗಿದ್ದ ಜಾಹ್ನವಿ ಕಪೂರ್ ಮರಳಿ ಬಂದಾಗ ಫೋಟೋ ಕ್ಲಿಕ್ಕಿಸಲು ಕೆಲ ಪಾಪರಾಜಿಗಳು ಕಾದು ನಿಂತಿರುತ್ತಾರೆ. ಈ ಸಂದರ್ಭದಲ್ಲಿ ಜಾಹ್ನವಿ ಕಪೂರ್ ಪಾಪರಾಜಿಗೆ ರಾಖಿ ಕಟ್ಟಿದ್ದಾರೆ. ಆತ ಕೂಡ ಇಂತಹ ಸಂದರ್ಭದಲ್ಲಿ ಸಹೋದರ, ಸಹೋದರಿಗೆ ಹಣ ನೀಡುವಂತೆ ನೀಡಲು ಮುಂದಾಗಿದ್ದಾನೆ.

ಆದರೆ ಜಾಹ್ನವಿ ಕಪೂರ್ ಇದನ್ನು ನಯವಾಗಿ ನಿರಾಕರಿಸಿ ಅಲ್ಲಿಂದ ತೆರಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಲೇ ನೆಟ್ಟಿಗರಿಂದ ಕಮೆಂಟ್ ಗಳ ಸುರಿಮಳೆ ಹರಿದು ಬಂದಿದೆ. ಕೆಲವರು ಪಾಪರಾಜಿಗೆ ಜಾಹ್ನವಿ ಕಪೂರ್ ರಾಕಿ ಕಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತಷ್ಟು ಮಂದಿ ಆತ ನೀಡಿದ ಹಣವನ್ನು ಜಾಹ್ನವಿ ಕಪೂರ್ ಪಡೆಯಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read