ಪಾಪರಾಜಿಗಳಿಗೆ ಫೋಸ್ ನೀಡಲು ಬಂದಾಗ ಎಡವಿದ ನಟಿ; ಜಾಹ್ನವಿ ಕಪೂರ್ ವಿಡಿಯೋ ವೈರಲ್

ಬಾಲಿವುಡ್‌ನ ಜನಪ್ರಿಯ ನಟಿಯರಲ್ಲಿ ಜಾಹ್ನವಿ ಕಪೂರ್ ಸಹ ಒಬ್ಬರು. ಈಕೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಶುಕ್ರವಾರ ರಾತ್ರಿ, ನಟಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದು, ಈ ವೇಳೆ ರೆಡ್ ಕಾರ್ಪೆಟ್ ಮೇಲೆ ನಡೆದ ಅವರು ಅಲ್ಲಲ್ಲಿ ಎಡವಿರುವ ವಿಡಿಯೋ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಜಾಹ್ನವಿ ರೆಡ್ ಕಾರ್ಪೆಟ್‌ನತ್ತ ಕ್ಯಾಟ್ ವಾಕ್ ಮಾಡುತ್ತಿರುವುದನ್ನು ನೋಡಬಹುದು. ಹಳದಿ ಬಣ್ಣದ ಗೌನ್ ನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದರು. ನಡೆಯುವಾಗ ಉಡುಪಿನಿಂದಾಗಿ ಎಡವಿದ್ದಾರೆ. ಕೂಡಲೇ ನಟಿಯ ಸ್ಟೈಲಿಸ್ಟ್ ಉಡುಪನ್ನು ಸರಿಪಡಿಸಿದ್ದಾರೆ.

ಆದರೆ, ನಟಿ ಜಾಹ್ನವಿ ಕಪೂರ್ ಎಡವಿದ್ರೂ ಪಾಪರಾಜಿಗಳಿಗೆ ಆತ್ಮವಿಶ್ವಾಸದಿಂದಲೇ ಫೋಸ್ ನೀಡಿದ್ದಾರೆ. ನೀವು ತುಂಬಾ ಚೆನ್ನಾಗಿ ಕಾಣಿಸುತ್ತಿದ್ದೀರಾ ಎಂದು ಛಾಯಾಗ್ರಾಹಕರು ಹೇಳಿದಾಗ ಈ ದಿನಗಳಲ್ಲಿ ನೀವು ಅತಿಯಾಗಿ ವರ್ತಿಸುತ್ತಿದ್ದೀರಿ ಎಂದು ನಟಿ ಹೇಳಿದ್ರು.

ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ ಜಾಹ್ನವಿ ಕಪೂರ್ ನಿರ್ದೇಶಕ ನಿತೇಶ್ ತಿವಾರಿ ಅವರ ʼಬವಾಲ್ʼ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ವರುಣ್ ಧವನ್ ನಾಯಕ ನಟರಾಗಿದ್ದಾರೆ. ರಾಜ್‌ಕುಮಾರ್ ರಾವ್ ಅವರೊಂದಿಗೆ ʼಮಿಸ್ಟರ್ ಅಂಡ್ ಮಿಸೆಸ್ ಮಹಿʼಯಲ್ಲಿಯೂ ಅಭಿನಯಿಸುತ್ತಿದ್ದಾರೆ. ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದ ಮಿಲಿಯಲ್ಲಿ ನಟಿ ಕೊನೆಯದಾಗಿ ಕಾಣಿಸಿಕೊಂಡರು.

https://youtu.be/LfmxqyX6TrI

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read