
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಅತ್ಯಧಿಕ 126 ಅಹವಾಲು ಸ್ವೀಕರಿಸಲಾಗಿದೆ. ನಂತರ ಸ್ಥಾನದಲ್ಲಿ ಜಿಲ್ಲಾ ಪಂಚಾಯತ್ಗೆ ಸಂಬಂಧಿಸಿದಂತೆ 38 ಅರ್ಜಿಗಳು ಬಂದಿವೆ. ಕಾರ್ಮಿಕ ಇಲಾಖೆಗೆ 02, ಸ್ಮಾರ್ಟ್ಸಿಟಿಗೆ 02, ಅಬಕಾರಿ ಇಲಾಖೆಗೆ 03, ಸಮಾಜ ಕಲ್ಯಾಣ ಇಲಾಖೆಗೆ 03, ಪಶುಪಾಲನಾ ಇಲಾಖೆಗೆ 03, ಕೆಎಸ್ಆರ್ಟಿಸಿಗೆ 08, ಆಹಾರ ಇಲಾಖೆಗೆ 08, ಮೆಸ್ಕಾಂ ಗೆ 10, ಪೊಲೀಸ್ ಇಲಾಖೆಗೆ 11, ಆರೋಗ್ಯ ಇಲಾಖೆಗೆ 14, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಗೆ ಸಂಬಂಧಿಸಿದ 19, ಮಹಾನಗರಪಾಲಿಕೆಗೆ 26, ಪ್ರೌಢಶಿಕ್ಷಣ ಇಲಾಖೆಗೆ 26, ಇತರೆ ಇಲಾಖೆಗಳಿಗೆ ಸಂಬಂಧಿಸಿದ 29 ಸೇರಿದಂತೆ ಒಟ್ಟು 328 ಅಹವಾಲು ಸ್ವೀಕರಿಸಲಾಗಿದ್ದು, ವಿಲೇವಾರಿ ಕಾರ್ಯ ಪ್ರಗತಿಯಲ್ಲಿದೆ ಎಂದು ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ತಿಳಿಸಿದ್ದಾರೆ.

