HomeLatest NewsBIG NEWS: ಶಾಸಕ ಭರತ್ ರೆಡ್ಡಿ ಡ್ರಗ್ ಪೆಡ್ಲರ್ ಗೆ ಗಾಂಜಾ ಮಾರಾಟಕ್ಕೆ ಗುತ್ತಿಗೆ ನೀಡಿದ್ದಾರೆ:...

BIG NEWS: ಶಾಸಕ ಭರತ್ ರೆಡ್ಡಿ ಡ್ರಗ್ ಪೆಡ್ಲರ್ ಗೆ ಗಾಂಜಾ ಮಾರಾಟಕ್ಕೆ ಗುತ್ತಿಗೆ ನೀಡಿದ್ದಾರೆ: ಜನಾರ್ಧನ ರೆಡ್ಡಿ ಗಂಭೀರ ಆರೋಪ

ಬಳ್ಳಾರಿ: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ-ಫೈರಿಂಗ್ ಪ್ರಕರಣದ ಬೆನ್ನಲ್ಲೇ ಶಾಸಕ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಮಾಡೆಲ್ ಹೌಸ್ ನಲ್ಲಿ ಬೆಂಕಿ ಪ್ರಕರಣ, ರೆಡ್ಡಿ ಸಹೋದರರು ಹಾಗೂ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ರೆಡ್ದಿ ಮಾಡೆಲ್ ಹೌಸ್ ಗೆ ಬೆಂಕಿ ಪ್ರಕರಣದಲ್ಲಿ ಆರು ಅಪ್ರಾಪ್ತರು ಸೇರಿ ಪೊಲೀಸರು ಎಂಟು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಹುಡುಗರು ರೀಲ್ಸ್ ಹಾಗೂ ಫೋಟೋ ಶೂಟ್ ಗೆ ಮಾಡೆಲ್ ಹೌಸ್ ಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಸಂಭವಿಸುದ ಬೆಂಕಿ ಅವಘಡ ಎಂದು ಎಸ್ ಪಿ ಹೇಳಿಕೆ ನೀಡಿದ್ದರು. ಎಸ್ ಪಿ ಹೇಳಿಕೆಗೆ ಕಿಡಿಕಾರಿರುವ ಜನಾರ್ಧನ ರೆಡ್ಡಿ, ಪೊಲೀಸರು ಸುಳ್ಳು ಹೇಳುತ್ತಿದ್ದಾರೆ. ಇದರ ಹ್ಂದೆ ರಾಜಕೀಯ ಕೈವಾಡವಿರುವುದು ಸ್ಪಷ್ಟ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶಾಸಕ ಜನಾರ್ಧನರೆಡ್ಡಿ, ಬಳ್ಳಾರಿಯಲ್ಲಿ ದೌಲ ಎಂಬ ಡ್ರಗ್ ಪೆಡ್ಲರ್ ಇದ್ದಾನೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ದೌಲನಿಗೆ ಗಾಂಜಾ ಮಾರಾಟದ ಗುತ್ತಿಗೆ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ.

ಶಾಸಕ ಭರತ್ ರೆಡ್ಡಿ ದೌಲನ ಮೂಲಕ ಗಾಂಜಾ ಮಾರಾಟ ಮಾಡಿಸುತ್ತಿದ್ದಾರೆ. ದೌಲ ಒಂದು ದಿನಕ್ಕೆ ೫೦ಕೆಜಿ ಗಾಂಜಾಮಾರಾಟ ಮಾಡುತ್ತಾನೆ. ಬಳ್ಳಾರಿ ನಗರದ ವಾರ್ಡ್ ಗಳಿಗೆ ಗಾಂಜಾ ಸಪ್ಲೈ ಮಾಡುತ್ತಾನೆ. ಈ ಮೂಲಕ ಭರತ್ ರೆಡ್ಡಿ ಡ್ರಗ್ಸ್ ಪೆಡ್ಲರ್ ಗೆ ರಕ್ಷಣೆ ನೀಡಿದ್ದಾರೆ. ಡಿಪಾರ್ಟ್ ಮೆಂಟ್ ಗಳು ಒಂದಾಗಿ ದೌಲನಿಂದ ಗಾಂಜಾ ಮಾರಾಟ ಮಾಡಿಸುತ್ತಿದೆ. ಇದರಲ್ಲಿ ಶಾಸಕ ಭರತ್ ರೆಡ್ಡಿಗೆ ಪಾಲಿದೆ ಎಂದು ಆರೋಪಿಸಿದ್ದಾರೆ.

ಭರತ್ ರೆಡ್ಡಿಗೆ ಸಣ್ಣ ವಯಸ್ಸಿನಲ್ಲಿ ಭಗವಂತ ಎಂಎಲ್ ಎ ಆಗುವ ಅವಕಾಶ ನೀಡಿದ್ದಾನೆ. ಎಲ್ಲಾ ಒಳ್ಳೆಯದು ಆಗುತ್ತೆ ಎಂಬ ಟೈಮ್ ನಲ್ಲಿ ಈ ರೀತಿ ಮಾಡುತ್ತಿದ್ದಾರೆ. ತಂದೆಯ ಗುಣ ಮಕ್ಕಳಿಗೂ ಬರುತ್ತದೆ ಎಂಬ ಮಾತಿದೆ. ಭರತ್ ರೆಡ್ಡಿ ತಂದೆ ನಕ್ಸಲರಿಗೆ ಗನ್ ಪೂರೈಕೆ ಮಾಡುತ್ತಿದ್ದರು. ನಕ್ಸಲರ ಜೊತೆ ಸಂಪರ್ಕ ಹೊಂದಿದ್ದರು. ತಂದೆಯ ಗುಣ ಮಗನಿಗೂ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular