ಶ್ರೀನಗರ: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ಮತ್ತಷ್ಟು ಕ್ರೌರ್ಯ ಎನ್ ಐಎ ತನಿಖೆಯಲ್ಲಿ ಬಯಲಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ ನ ಬೈಸರ ವ್ಯಾಲಿಯಲ್ಲಿ ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ್ದ ಗುಂಡಿನ ದಾಳಿಯಲ್ಲಿ 28 ಜನರು ಮೃತಪಟ್ಟಿದ್ದು, ಎನ್ ಐಎ ತನಿಖೆ ಚುರುಕುಗೊಳಿಸಿದೆ.
ತನಿಖೆ ವೇಳೆ ಉಗ್ರರು ಪಹಲ್ಗಾಮ್ ಯಾವ ರೀತಿಯಾಗಿ ಆಗಮಿಸಿದ್ದರು ಎಂಬುದು ತಿಳಿದುಬಂದಿದೆ. ಜಿಪ್ ಲೈನ್ ಮೂಲಕ ಉಗ್ರರು ಬೈಸರನ್ ವ್ಯಾಲಿಗೆ ಎಂಟ್ರಿ ಕೊಟ್ಟಿದ್ದರು. ಕೊಕೆರ್ನಾಗ್ ಫಾರೆಸ್ಟ್ ಏರಿಯಾದಿಂದ ಬೈಸರನ್ ವ್ಯಾಲಿಗೆ ಕೇವಲ 35 ನಿಮಿಷಗಳಲ್ಲಿ ಲಗ್ಗೆ ಇಟ್ಟಿದ್ದಾರೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬಂದಿದ್ದ ಇಬರು ಉಗ್ರರು ಮೊದಲೇ ಅಂಗಡಿಯೊಂದರಲ್ಲಿ ಅಡಗಿ ಕುಳಿತಿದ್ದರು. ಬಳಿಕ ಪ್ರವಾಸಿಗರ ಮೇಲೆ ಎಕೆ 47 ಹಾಗೂ M4 ರೈಫಲ್ ಗಳಿಂದ ಗುಂಡಿನ ಸುರಿಮಳೆಗೈದಿದ್ದಾರೆ. ಮೂವರು ವಿದೇಶಿ ಉಗ್ರರು ಹಾಗೂ ಸ್ಥಳೀಯ ಉಗ್ರರಿಂದ ಕೃತ್ಯವೆಸಗಲಾಗಿದೆ. ಪ್ರವಾಸಿಗರನ್ನು ಗುಂಡಿಟ್ಟು ಹತ್ಯೆಗೈದು ಹಲವರ ಮೊಬೈಲ್ ಕದ್ದೊಯ್ದಿದ್ದಾರೆ ಎಂದು ತಿಳಿದುಬಂದಿದೆ.