HomeLatest NewsBIG NEWS: ವಾರದ ಹಿಂದಷ್ಟೇ ವಿವಾಹವಾಗಿದ್ದ ಲೆ.ನೇವಿ ಆಫೀಸರ್ ಉಗ್ರರ ದಾಳಿಗೆ ಬಲಿ: ಪಾರ್ಥಿವ ಶರೀರ...

BIG NEWS: ವಾರದ ಹಿಂದಷ್ಟೇ ವಿವಾಹವಾಗಿದ್ದ ಲೆ.ನೇವಿ ಆಫೀಸರ್ ಉಗ್ರರ ದಾಳಿಗೆ ಬಲಿ: ಪಾರ್ಥಿವ ಶರೀರ ದೆಹಲಿಗೆ: ಮೃತದೇಹದ ಮುಂದೆ ಪತ್ನಿ ಗೋಳಾಟ

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ ಒಟ್ಟು 26 ಜನರು ಬಲಿಯಾಗಿದ್ದು, ಮೃತದೇಹಗಳನ್ನು ಆಯಾ ರಾಜ್ಯಗಳಿಗೆ ತಲುಪಿಸುವ ವ್ಯವಸ್ಥೆಯನ್ನು ಜಮ್ಮು-ಕಾಶ್ಮೀರ ಸರ್ಕಾರ, ಸ್ಥಳೀಯ ಆಡಳಿತ ಹಾಗೂ ಆಯಾ ರಾಜ್ಯ ಸರ್ಕಾರಗಳು ಮಾಡುತ್ತಿವೆ. ವಾರದ ಹಿಂದಷ್ಟೇ ವಿವಾಹವಾಗಿದ್ದ ಲೆಫ್ಟಿನೆಂಟ್ ನೇವಿ ಆಫೀಸರ್ ಕೂಡ ಉಗ್ರರ ಗುಂಡೇಟಿಗೆ ಬಲಿಯಾಗಿದ್ದಾರೆ.

ವಾರದ ಹಿಂದಷ್ಟೇ ಮದುವೆಯಾಗಿದ್ದ ಲೆ.ನೇವಿ ಆಫೀಸರ್ ವಿನಯ್ ನರ್ವಾಲ್ ಪತ್ನಿ ಜೊತೆ ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಪತ್ನಿಯ ಕಣ್ಮುಂದೆಯೇ ಹುತಾತ್ಮರಾಗಿದ್ದಾರೆ. ಲೆ.ನರ್ವಾಲ್ ಅವರ ಪಾರ್ಥಿವ ಶರೀರ ದೆಹಲಿಗೆ ಬಂದು ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತದೇಹದ ಮುಂದೆ ಪತ್ನಿ ಕಣ್ಣೀರಿಟ್ಟು ಗೋಳಾಡುತ್ತಿರುವ ದೃಶ್ಯ ಕರುಳುಹಿಂಡುವಂತಿದೆ. ಕುಟುಂಬದವರು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

For Latest News Updates, Join Our Whatsapp Community🚩
RELATED ARTICLES

Most Popular