ಶ್ರೀನಗರ: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ 28 ಜನರನ್ನು ಉಗ್ರರು ಬಲಿ ಪಡೆದ ಬೆನ್ನಲ್ಲೇ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ಭಾರತೀಯ ಸೇನೆ ಚುರುಕುಗೊಳಿಸಿದೆ. ಜಮ್ಮು-ಕಾಶ್ಮೀರದಲ್ಲಿ ಉಗ್ರರ ಮನೆಗಳನ್ನು ನೆಲಸಮ ಮಾಡಲಗುತ್ತಿದೆ. ಈಗಾಗಲೇ 7 ಉಗ್ರರ ಮನೆಗಳನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ. ಇದರ ಬೆನ್ನಲ್ಲೇ ಮತ್ತೋರ್ವ ಶಂಕಿತ ಉಗ್ರನ ಮನೆಯನ್ನು ಬಾಂಬ್ ಸ್ಫೋಟಿಸಿ ಧ್ವಂಸ ಮಾಡಲಾಗಿದೆ.
ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕಾಲಾರೂಸ್ ಪ್ರದೇಶದಲ್ಲಿ ಉಫ಼್ರ ಫಾರೂಕ್ ಅಹ್ಮದ್ ತಡ್ವಾ ನಿವಾಸದ ಮೇಲೆ ಅಧಿಕಾರಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಮನೆ ಸಂಪೂರ್ಣ ನಾಶವಾಗಿದೆ.
ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗಿರುವ ಇಅತರರ ವಿರುದ್ಧವೂ ಇದೇ ರೀತಿ ಕ್ರಮ ಕೈಗೊಳ್ಳಲಗುವುದು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.