ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಶಿವಮೊಗ್ಗ ಮೂಲದ ಮಂಜುನಾಥ್ ಮೃತದೇಹ ರವಾನೆ ಮತ್ತಷ್ಟು ವಿಳಂಬವಾಗಿದೆ.
ಮಂಜುನಾಥ್ ಮೃತದೇಹವಿರುವ ವಿಮಾನ ಶ್ರೀನಗರದಿಂದ ದೆಹಲಿಗೆ 7:30ಕ್ಕೆ ಲ್ಯಾಂಡ್ ಆಗಲಿದೆ. ದೆಹಲಿಗೆ ಲ್ಯಾಂಡ್ ಆದ ಬಳಿಕ ಬೆಂಗಳೂರಿಗೆ ಮೃತದೇಹ ಶಿಫ್ಟ್ ಆಗಲಿದೆ. ದೆಹಲಿಯಿಂದ ಇಂದು ಮಧ್ಯರಾತ್ರಿ 1ಗಂಟೆಗೆ ವಿಮಾನ ಹೊರಡಲಿದೆ.
ಬೆಂಗಳೂರಿಗೆ ನಾಳೆ ಬೆಳಗಿನ ಜಾವ ಮೃತದೇಹ ಬಂದು ತಲುಪಲಿದ್ದು, ಬಳಿಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರಸ್ತೆ ಮಾರ್ಗವಾಗಿ ರವಾನಿಸಲಾಗುತ್ತಿದೆ.