HomeKarnatakaಜೈನಮುನಿ ಹತ್ಯೆ ಪ್ರಕರಣ : ಹಂತಕರಿಗೆ ಫೋನ್ ಕರೆ ಮಾಡಿದವರಿಗೆ ಪೊಲೀಸರಿಂದ ನೋಟಿಸ್!

ಜೈನಮುನಿ ಹತ್ಯೆ ಪ್ರಕರಣ : ಹಂತಕರಿಗೆ ಫೋನ್ ಕರೆ ಮಾಡಿದವರಿಗೆ ಪೊಲೀಸರಿಂದ ನೋಟಿಸ್!

ಬೆಳಗಾವಿ  : ಚಿಕ್ಕೋಡಿ ತಾಲೂಕಿನ ಹೀರೆಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ತನಿಖೆ ನಡೆಸುತ್ತಿದ್ದು,ಇದೀಗ ಹಂತಕರಿಗೆ ಕರೆ ಮಾಡಿದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಜೈನಮುನಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ನಾರಾಯಣ ಮಾಳಿ ಮತ್ತು ಎ2 ಆರೋಪಿ ಹಸನ್ ದಲಾಯತ್‌ನನ್ನು ಜುಲೈ 17ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಈ ಹಿನ್ನೆಲೆ ಡಿವೈಎಸ್ಪಿ ಬಸವರಾಜ್ ಯಲಿಗಾರ ಅವರ ನೇತೃತ್ವದಲ್ಲಿ ಆರೋಪಿಗಳ ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದು, ಈಗಾಗಲೇ ಚಿಕ್ಕೋಡಿ ಪೊಲೀಸರು ಹಲವು ಟೆಕ್ನಿಕಲ್ ಎವಿಡೆನ್ಸ್‌ಗಳನ್ನು ಸಂಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೈನಮುನಿಗಳು ಬಳಸುತ್ತಿದ್ದ ಎರಡು ಮೊಬೈಲ್ ಹಾಗೂ ಇಬ್ಬರು ಆರೋಪಿಗಳ ತಲಾ ಒಂದೊಂದು ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಹಂತಕರು ಹತ್ಯೆ ಘಟನೆಗೂ ಮುನ್ನ ಹಾಗೂ ಬಳಿಕ ಕರೆ ಮಾಡಿದವರಿಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಹಂತಕರು ಜೈನ ಮುನಿಗಳಿಗೆ ಒಂದು ವಾರದ ಮುನ್ನ ಕರೆ ಮಾಡಿದ್ದರು. ಆರೋಪಿಗಳು ಹತ್ಯೆಗೂ ಮುನ್ನ ಹಾಗೂ ನಂತರ ಯಾರಿಗೆಲ್ಲಾ ಕರೆ ಮಾಡಿದ್ದರು ಅವರಿಗೆಲ್ಲಾ ನೋಟಿಸ್ ನೀಡಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular