HomeEntertainmentನೀವು 20 ಹಿಟ್ ಕೊಟ್ಟಾಗ ಹುಟ್ಟದೇ ಇದ್ದ ತಮಿಳು ನಟರನ್ನೆಲ್ಲ ಸರ್ ಅಂತೀರಲ್ಲ ಶಿವಣ್ಣ; ಕೇವಲ...

ನೀವು 20 ಹಿಟ್ ಕೊಟ್ಟಾಗ ಹುಟ್ಟದೇ ಇದ್ದ ತಮಿಳು ನಟರನ್ನೆಲ್ಲ ಸರ್ ಅಂತೀರಲ್ಲ ಶಿವಣ್ಣ; ಕೇವಲ 4 ಚಿತ್ರ ಮಾಡಿದ ನಟನನ್ನು ಸರ್ ಎಂದ ಶಿವಣ್ಣನ ವಿರುದ್ಧ ಫ್ಯಾನ್ಸ್ ಬೇಸರ

ರಜನಿಕಾಂತ್ ನಟನೆಯ ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಮಿಂಚಿದ ಬಳಿಕ ಕನ್ನಡದ ನಟ ಶಿವರಾಜ್‌ಕುಮಾರ್‌ಗೆ ಚಂದನವದಾಚೆಗೂ ಮಾರ್ಕೆಟ್ ಹುಟ್ಟಿಕೊಂಡಿದ್ದು, ತೆಲುಗು ಹಾಗೂ ತಮಿಳು ಚಿತ್ರಗಳಲ್ಲಿ ದೊಡ್ಡ ಆಫರ್‌ಗಳು ಹರಿದುಬಂದವು.

ರಾಮ್‌ಚರಣ್, ಧನುಷ್ ರೀತಿಯ ಸ್ಟಾರ್ ನಟರ ಚಿತ್ರಗಳಿಗೂ ಶಿವಣ್ಣ ಬಣ್ಣ ಹಚ್ಚಿದ್ದು, ಸದ್ಯ ಶಿವಣ್ಣ ಸೌತ್ ಇಂಡಿಯಾ ಸ್ಟಾರ್ ಆಗಿ ಮಾರ್ಪಟ್ಟಿದ್ದಾರೆ. ಹೀಗಾಗಿ ಶಿವರಾಜ್‌ಕುಮಾರ್ ತಮಿಳು ಹಾಗೂ ತೆಲುಗು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಇತ್ತೀಚೆಗಷ್ಟೆ ನಡೆದ ತಮಿಳಿನ ವಿಕಟನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಶಿವಣ್ಣ ಮಾಡಿದ ಭಾಷಣ ವಿವಾದ ಹುಟ್ಟುಹಾಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ಶಿವರಾಜ್‌ಕುಮಾರ್ ಯುವ ನಟ ಪ್ರದೀಪ್ ರಂಗನಾಥನ್‌ಗೆ ಸರ್ ಎಂದು ತಲೆ ಬಾಗಿ ನಮಸ್ಕರಿಸಿ ಮಾತನಾಡಿದ್ದು, ಇದು ಅಭಿಮಾನಿಗಳು ಹಾಗೂ ಕನ್ನಡ ಸಿನಿ ಪ್ರೇಕ್ಷಕರಲ್ಲಿ ಮುಜುಗರ ತಂದಿದೆ ಎಂದು ಸ್ವತಃ ಅಭಿಮಾನಿಗಳು ಹಾಗೂ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ನನಗೆ ಪ್ರದೀಪ್ ಸರ್ ಎಂದರೆ ತುಂಬಾ ಇಷ್ಟ ಎಂದ ಶಿವಣ್ಣ ಧನುಷ್ ತನ್ನ ನೆಚ್ಚಿನ ನಟ, ನಿಮ್ಮನ್ನು ನೋಡಿದಾಗಲೆಲ್ಲ ಅವರನ್ನೇ ನೋಡಿದ ಹಾಗೆ ಎನಿಸುತ್ತದೆ, ನಾನು ನಿಮ್ಮ ಅಭಿಮಾನಿ ಎಂದು ತಲೆ ಬಾಗಿ ನಮಸ್ಕರಿಸಿದರು. ಈ ಕ್ಲಿಪ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಹಲವು ಕನ್ನಡಿಗರು ನೀವು ಇಪ್ಪತ್ತು ಹಿಟ್ ಸಿನಿಮಾಗಳನ್ನು ಕೊಟ್ಟಾಗ ಹುಟ್ಟೇ ಇರದಿದ್ದ ಹೀರೊಗಳಿಗೆ ಏಕೆ ಸರ್ ಎನ್ನುತ್ತೀರ ಎಂದು ಬರೆದುಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೆಲವರು ಯುವ ನಟರಿಗೆ ಸರ್ ಎಂದರೆ ತಪ್ಪೇನು, ಅವರ ಕೆಲಸಕ್ಕೆ ಫ್ಯಾನ್ ಎಂದರೆ ತಪ್ಪೇನು ಎಂದು ಪ್ರಶ್ನಿಸಿದ್ದು, ಶಿವಣ್ಣನ ನಡೆಯನ್ನು ವಹಿಸಿಕೊಂಡಿದ್ದಾರೆ. ಕಲೆಗೆ ವಯಸ್ಸು ಮುಖ್ಯವಲ್ಲ, ಪ್ರದೀಪ್ ರಂಗನಾಥನ್ ಮೊದಲ ಮೂರು ಸಿನಿಮಾಗಳಲ್ಲಿ ಸತತ ನೂರು ಕೋಟಿ ಹಿಟ್ ಕೊಟ್ಟ ನಾಯಕ, ಅಂಥ ಸಾಧನೆ ದಕ್ಷಿಣ ಭಾರತದಲ್ಲೇ ಯಾರೂ ಮಾಡಿಲ್ಲ, ಆತನೂ ಸಹ ಓರ್ವ ಶ್ರೇಷ್ಠ ಸಾಧಕ ಎಂದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular