HomeKarnatakaರಾಜ್ಯದ ವಿವಿಧ ಜೈಲುಗಳಲ್ಲಿ ಕಳೆದ 9 ತಿಂಗಳಲ್ಲಿ 410 ಮೊಬೈಲ್‌ಗಳು ಪತ್ತೆ; ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ...

ರಾಜ್ಯದ ವಿವಿಧ ಜೈಲುಗಳಲ್ಲಿ ಕಳೆದ 9 ತಿಂಗಳಲ್ಲಿ 410 ಮೊಬೈಲ್‌ಗಳು ಪತ್ತೆ; ಪರಪ್ಪನ ಅಗ್ರಹಾರ ಜೈಲಿನಲ್ಲಿಯೇ 334 ಮೊಬೈಲ್ ಸೀಜ್

ಬೆಂಗಳೂರು: ರಾಜ್ಯದ ವಿವಿಧ ಜೈಲುಗಳಲ್ಲಿ ಪೊಲೀಸರು ನಡೆಸಿದ ದಾಲಿ, ಕಾರ್ಯಾಚರಣೆಯ ವೇಳೆ ಅಪಾರಪ್ರಮಾಣದ ಮೊಬೈಲ್ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕೈದಿಗಳು ಕಾರಾಗೃಹದಲ್ಲಿದ್ದುಕೊಂಡೇ ರಾಜಾರೋಷವಾಗಿ ಮೊಬೈಲ್ ಬಳಸುತ್ತಿದ್ದಾರೆ ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.

ಕೈದಿಗಳಿಗೆ ಮೊಬೈಲ್‌ ನಿಷೇಧವಿದ್ದರೂ ಜೈಲುಗಳಲ್ಲಿರುವ ಕೈದಿಗಳ ಬಳಿ ಮೊಬೈಲ್ ಪತ್ತೆಯಾಗಿರುವುದು ಆತಂಕಕಾರಿ ಬೆಳವಣಿಗೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಕಳೆದ 9 ತಿಂಗಳಲ್ಲಿ 410 ಮೊಬೈಲ್‌ಗಳು ಪತ್ತೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪೈಕಿ ಪರಪ್ಪನ ಅಗ್ರಹಾರ ಜೈಲಿನಲ್ಲೇ ಬರೋಬ್ಬರಿ 334 ಮೊಬೈಲ್ ಗಳು ಪತ್ತೆಯಾಗಿದ್ದು, ಅವುಗಳನ್ನು ಸೀಜ್ ಮಾಡಲಾಗಿದೆ. ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರು ಕಠಿಣ ನಿಯಮ ಜಾರಿ ಮಾಡಿರುವುದರಿಂದ ಅವರ ಅವಧಿಯಲ್ಲೇ ಜೈಲುಗಳಲ್ಲಿ ಹೆಚ್ಚು ಮೊಬೈಲ್ ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

2023ರಲ್ಲಿ 72 ಮೊಬೈಲ್ ಗಳು ಮತ್ತು 28 ಸಿಮ್ ಗಳು ಪತ್ತೆಯಾಗಿವೆ. 2024ರಲ್ಲಿ 104 ಮೊಬೈಲ್ ಹಾಗೂ 10 ಸಿಮ್ ಗಳು ಪತ್ತೆಯಾಗಿವೆ. 2025ರಲ್ಲಿ 148 ಮೊಬೈಲ್ ಹಾಗೂ 68 ಸಿಮ್ ಗಳು ಹಾಗೂ 2026ರಲ್ಲಿ 410 ಮೊಬೈಲ್ ಹಾಗೂ 228 ಸಿಮ್ ಗಳು ಪತ್ತೆಯಾಗಿವೆ. ಜೈಲಿನಲ್ಲಿ ವರ್ಷದಿಂದ ವರ್ಷಕ್ಕೆ ಮೊಬೈಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿವೆ.

ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಅವಧಿಯಲ್ಲಿಯೇ ಹೆಚ್ಚು ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ 6-7 ಮೊಬೈಲ್ ಅಷ್ಟೇ ಜೈಲಿನಲ್ಲಿ ಇರೋ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular