HomeInternationalBREAKING NEWS: ಜಾಫರ್ ಎಕ್ಸ್ ಪ್ರೆಸ್ ರೈಲು ಹೈಜಾಕ್: ಪ್ರತ್ಯೇಕತಾವಾದಿಗಳಿಂದ 6 ಪಾಕಿಸ್ತಾನಿ ಯೋಧರ ಗುಂಡಿಟ್ಟು...

BREAKING NEWS: ಜಾಫರ್ ಎಕ್ಸ್ ಪ್ರೆಸ್ ರೈಲು ಹೈಜಾಕ್: ಪ್ರತ್ಯೇಕತಾವಾದಿಗಳಿಂದ 6 ಪಾಕಿಸ್ತಾನಿ ಯೋಧರ ಗುಂಡಿಟ್ಟು ಹತ್ಯೆ

ಬಲೂಚಿಸ್ತಾನ್ ಲಿಬರೇಷನ್ ಆರ್ಮಿ ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಹಜಾಕ್ ಮಾಡಿದ್ದು, ರೈಲಿನಲ್ಲಿದ್ದ 6 ಪಾಕಿಸ್ತಾನಿ ಯೋಧರನ್ನು ಗುಂಡಿಟ್ಟು ಹತ್ಯೆ ಮಾಡಿದೆ.

ಬಲೂಚಿಸ್ತಾನಿ ಲಿಬರೇಷನ್ ಆರ್ಮಿ ಎಂಬ ಪ್ರತ್ಯೇಕತಾವಾದಿಗಳ ಗುಂಪು, ಜಾಫರ್ ಎಕ್ಸ್ ಪ್ರೆಸ್ ರೈಲನ್ನು ಹೈಜಾಕ್ ಮಾಡಿದ್ದು, ರೈಲಿನಲ್ಲಿದ್ದ 400ಕ್ಕೂ ಹೆಚ್ಚು ಜನರನ್ನು ರೈಲಿನಲ್ಲಿಯೇ ದಿಗ್ಬಂಧನದಲ್ಲಿಟ್ಟಿದೆ. ಇದೇ ರೈಲಿನಲ್ಲಿ ಪಾಕಿಸ್ತಾನದ ಯೋಧರು ಕೂಡ ಪ್ರಯಾಣಿಸುತ್ತಿದ್ದರು.

ಬಿಎಲ್ಎ ಪ್ರತ್ಯೇಕತಾವಾದಿಗಳು ರೈಲನ್ನು ಹಜಾಕ್ ಮಾಡುತ್ತಿದ್ದಂತೆ ಪಾಕಿಸ್ತಾನ ಯೋಧರು ಉಗ್ರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಿಎಲ್ಎ ಹಾಗೂ ಪಾಕ್ ಸೈನಿಕರ ನಡುವೆ ರೈಲಿನಲ್ಲಿಯೇ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಗುಂಡಿನ ದಾಳಿಯಲ್ಲಿ 6 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular