HomeIndiaBIG NEWS: ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 13 ಜನರಿಗೆ ಗಂಭೀರ ಗಾಯ

BIG NEWS: ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 13 ಜನರಿಗೆ ಗಂಭೀರ ಗಾಯ

ಜಬಲ್ಪುರ: ಶಸ್ತ್ರಾಸ್ತ್ರ ತಯಾರಿಕಾ ಫ್ಯಾಕ್ಟರಿಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, 13 ಜನರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದ ಖಮಾರಿಯಾದಲ್ಲಿ ನಡೆದಿದೆ.

ಘಟನೆಯಲ್ಲಿ 13 ನೌಕರರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಜಬಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಖಮಾರಿಯಾದ ಶಸ್ತ್ರಾಸ್ತ್ರ ತಯರೈಕಾ ಕಾರ್ಖಾನೆ ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಬಹುದೊಡ್ಡ ಕಾರ್ಖಾನೆಯಾಗಿದೆ ಇದನ್ನು ಅರ್ಡನೆನ್ಸ್ ಫ್ಯಾಕ್ತರಿ ಎಂದೂ ಕರೆಯಲಾಗುತ್ತದೆ. ಸೇನೆಗೆ ಬಳಸುವ ಹಲವು ಆಯುಧಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫ್ಯಾಕ್ಟರಿಯ ಎಫ್ 6 ಪ್ರದೇಶದಲ್ಲಿನ 1000 ಪೌಂಡರ್ ಬಾಂಬ್ ಘಟಕದಲ್ಲಿ ಸ್ಫೊಟ ಸಂಭವಿಸಿದೆ. ಘಟನೆಯಲ್ಲಿ 13 ಜನರು ಗಾಯಗೊಂಡಿದ್ದು, ಸ್ಫೋಟದ ತೀವ್ರತೆಗೆ ಕತ್ಟಡ ಸಂಪೂರ್ಣ ಹಾನಿಯಾಗಿದೆ ಎಂದು ತಿಳಿದುಬಂದಿದೆ.

 

For Latest News Updates, Join Our Whatsapp Community🚩
RELATED ARTICLES

Most Popular