HomeIndiaಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ನೀಡಿದ್ದೇ ರಾಜೀವ್ ಗಾಂಧಿ :...

ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ನೀಡಿದ್ದೇ ರಾಜೀವ್ ಗಾಂಧಿ : ಕಾಂಗ್ರೆಸ್

ನವದೆಹಲಿ : ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ನೀಡಿದ್ದೇ ರಾಜೀವ್ ಗಾಂಧಿ, ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ. ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿನಾಯಕರಾಗಿದ್ದರು ಎಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ ನೀಡಿದೆ.

ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಮಾಡಿದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಲವು ವಿಚಾರಗಳನ್ನಿಟ್ಟುಕೊಂಡು ಬಿಜೆಪಿಗೆ ಟಾಂಗ್ ನೀಡಿದೆ.

ಭಾರತದ ಹಳ್ಳಿ, ಹಳ್ಳಿಗಳಲ್ಲಿ ಲಕ್ಷಾಂತರ ರಾಮದೇಗುಲ ನಿರ್ಮಾಣವಾಗಿದ್ದು ಕಾಂಗ್ರೆಸ್ ಆಡಳಿತದಲ್ಲಿ.
ರಾಮರಾಜ್ಯದ ಕನಸು ಕಂಡ ಮಹಾತ್ಮಾ ಗಾಂಧಿ ಕಾಂಗ್ರೆಸ್ ಅಧಿನಾಯಕರಾಗಿದ್ದರು.ನಾಥುರಾಮ್ ಗೂಡ್ಸೆ ಹಾರಿಸಿದ ಗುಂಡಿಗೆ ಎದೆ ಸೀಳಿ ಹುತಾತ್ಮರಾದಾಗ ಮಹಾತ್ಮ ಗಾಂಧೀಜಿ ಅವರು ಹೇಳಿದ ಕೊನೇ ಮಾತು ಹೇ ರಾಮ್! ಆಗ ಬಿಜೆಪಿ ಹುಟ್ಟೇ ಇರಲಿಲ್ಲ  ಎಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1985-86 ರಲ್ಲಿ ಅಯೋಧ್ಯೆಯಲ್ಲಿ ಮೊದಲ ಬಾರಿಗೆ ಬೀಗ ತೆಗೆಸಿ ರಾಮನ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇ ರಾಜೀವ್ ಗಾಂಧಿ.1989 ರಲ್ಲಿ ರಾಮ ಮಂದಿರ ಶಿಲಾನ್ಯಾಸಕ್ಕೆ ವಿಶ್ವ ಹಿಂದೂ ಪರಿಷತ್ ಗೆ ಅವಕಾಶ ಕಲ್ಪಿಸಿದವರು ರಾಜೀವ್ ಗಾಂಧಿ.ರಾಜೀವ್ ಗಾಂಧಿ ಅವರು ಮೊದಲ ಹೆಜ್ಜೆ ಇಡದೇ ಹೋಗಿದ್ದರೆ ಬಿಜೆಪಿಯವರಿಗೆ ಇದರ ಆಲೋಚನೆಯೇ ಬರುತ್ತಿರಲಿಲ್ಲ.ದೂರದರ್ಶನದಲ್ಲಿ ರಾಮಾಯಣದ ಸೀರಿಯಲ್ ಪ್ರಸಾರ ಮಾಡಿ ಮನೆ, ಮನೆಯೂ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್ ಸರ್ಕಾರ  ಎಂದಿದೆ.

ರಾಮ ಮತ್ತು ಆತನ ಆದರ್ಶಗಳನ್ನು ಕಾಂಗ್ರೆಸ್ ಮೊದಲಿಂದಲೂ ಪಾಲಿಸುತ್ತಾ ಬಂದಿದೆ.ಆದರೆ ರಾಮನ ಹೆಸರು ಹೇಳಿಕೊಂಡೇ ರಾಜಕೀಯ ಆಶ್ರಯ ಹುಡುಕುವ ಬಿಜೆಪಿಗೆ ಸನ್ಮತಿ ದೇ ಭಗವಾನ್” ಎಂದು ಹೇಳಬೇಕಾಗಿ ಬಂದಿರೋದು ದುರಂತ ಎಂದು ಕಾಂಗ್ರೆಸ್ ಟಾಂಗ್ ನೀಡಿದೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular