ಕಡಿಮೆ ದರಕ್ಕೆ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಜನಪ್ರಿಯತೆ ಗಳಿಸಿರುವ ಇ-ಕಾಮರ್ಸ್ ದೈತ್ಯ ಮೀಶೋ(Meesho) ಈಗ ಸಂಕಷ್ಟಕ್ಕೆ ಸಿಲುಕಿದೆ. ಆದಾಯ ತೆರಿಗೆ ಇಲಾಖೆಯು ಕಂಪನಿಗೆ ಬರೋಬ್ಬರಿ ₹1,500 ಕೋಟಿ($1.5 ಬಿಲಿಯನ್) ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
2022-23ರ ಹಣಕಾಸು ವರ್ಷದಲ್ಲಿ ಮೀಶೋ ತನ್ನ ನೈಜ ಆದಾಯವನ್ನು ಕಡಿಮೆ ತೋರಿಸಿದೆ ಮತ್ತು ಆದಾಯದ ಅಂಕಿಅಂಶಗಳಲ್ಲಿ ವ್ಯತ್ಯಾಸಗಳಿವೆ ಎಂದು ಐಟಿ ಇಲಾಖೆ ಆರೋಪಿಸಿದೆ.ಕಂಪನಿಗಳು ಗ್ರಾಹಕರಿಗೆ ನೀಡುವ ಭಾರಿ ಡಿಸ್ಕೌಂಟ್ಗಳನ್ನು “ವ್ಯಪಾರ ವೆಚ್ಚ” ಎಂದು ತೋರಿಸಿ ತೆರಿಗೆ ಉಳಿಸಲು ಪ್ರಯತ್ನಿಸುತ್ತವೆ. ಆದರೆ, ಇದನ್ನು ಆದಾಯ ತೆರಿಗೆ ಇಲಾಖೆ ಒಪ್ಪುತ್ತಿಲ್ಲ.
ಹಳೆಯ ಇತಿಹಾಸ: ಮೀಶೋಗೆ ಇಂತಹ ನೋಟಿಸ್ಗಳು ಹೊಸದೇನಲ್ಲ. 2022ರ ಹಣಕಾಸು ವರ್ಷದಲ್ಲೂ ₹572 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್ ಬಂದಿತ್ತು. ಆ ಪ್ರಕರಣ ಸದ್ಯ ಕರ್ನಾಟಕ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದು, ಕೋರ್ಟ್ ತಡೆಯಾಜ್ಞೆ (Stay) ನೀಡಿದೆ.
ಕಂಪನಿಯ ಪ್ರತಿಕ್ರಿಯೆ: ಐಟಿ ಇಲಾಖೆಯ ಈ ನೋಟಿಸ್ ಅನ್ನು ಮೀಶೋ ಆಡಳಿತ ಮಂಡಳಿ ನಿರಾಕರಿಸಿದೆ. ತಮ್ಮ ಹಣಕಾಸಿನ ವಹಿವಾಟಿನ ಮೇಲೆ ಇದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ ಮತ್ತು ಇದರ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಕಂಪನಿ ತಿಳಿಸಿದೆ.
ಮೀಶೋದ ಪ್ರಸ್ತುತ ಆರ್ಥಿಕಸ್ಥಿತಿ
ಮೀಶೋದ ಆದಾಯವು 31% ಹೆಚ್ಚಳವಾಗಿದ್ದರೂ (₹3,517 ಕೋಟಿ), ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ನಷ್ಟವು 13 ಪಟ್ಟು ಹೆಚ್ಚಾಗಿ ₹491 ಕೋಟಿ ತಲುಪಿದೆ. ಈ ಬೆಳವಣಿಗೆಗಳ ನಡುವೆ, ಷೇರು ಮಾರುಕಟ್ಟೆಯಲ್ಲಿ ಮೀಶೋ ಷೇರುಗಳು ಇತ್ತೀಚೆಗೆ ₹159.10 ರ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿವೆ.

