ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡವರು, ಸುಟ್ಟ ಗಾಯಾಳುಗಳು, ಅಪರಾಧ ಕಾನೂನು ಸಂಘರ್ಷದಂತಹ ಪ್ರಕರಣದಲ್ಲಿ(ಸಂಭಾವ್ಯ ಸೇರಿ) ರಾಜ್ಯದ ಆಸ್ಪತ್ರೆಗಳು ಮುಂಗಡ ಹಣ ಪಾವತಿಗೆ ಒತ್ತಾಯಿಸಿದೆ ವಿಳಂಬ ಮಾಡದೆ ಮೊದಲು ಚಿಕಿತ್ಸೆ ನೀಡಬೇಕು ಎಂದು ಸರ್ಕಾರ ಮತ್ತೆ ಸೂಚನೆ ನೀಡಿದೆ.
ಆರೋಗ್ಯ ಇಲಾಖೆ ವತಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ನೋಂದಣಿಯಾದ ಎಲ್ಲಾ ವೈದ್ಯರು, ವೈದ್ಯಕೀಯ ಸಂಸ್ಥೆಗಳು ವಿಳಂಬ ಮಾಡದೆ ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನಿರಾಕರಿಸದೆ ಮೊದಲು ಪ್ರಾಥಮಿಕ ಚಿಕಿತ್ಸೆ ನೀಡಿ ಆರೋಗ್ಯ ಸ್ಥಿರವಾಗುವಂತೆ ನೋಡಿಕೊಳ್ಳಬೇಕು. ಸೌಲಭ್ಯ ಕೊರತೆ ಇದ್ದಲ್ಲಿ ಸಮೀಪದ ಆಸ್ಪತ್ರೆಗಳಿಗೆ ವರ್ಗಾಯಿಸುವ ಮೊದಲು ಪ್ರಥಮ ಚಿಕಿತ್ಸೆ ನೀಡಬೇಕು. ಸಂಪೂರ್ಣ ವೈದ್ಯಕೀಯ ವಿವರದೊಂದಿಗೆ ಕಳುಹಿಸಿಕೊಡಬೇಕು. ಇಲ್ಲದಿದ್ದಲ್ಲಿ ದಂಡ, ಜೈಲು ಶಿಕ್ಷೆ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಅಪಘಾತಕ್ಕೀಡಾದವರ ಚಿಕಿತ್ಸೆಯ ಬಗ್ಗೆ ಪುನರುಚ್ಚರಣೆ ಮತ್ತು ನಿರ್ದೇಶನಗಳ ಕುರಿತು ಸರ್ಕಾರಿ ಸುತ್ತೋಲೆ

