HomeLatest NewsBIG NEWS : ರಾಜ್ಯದಲ್ಲಿ 'ಮಂಗನ ಖಾಯಿಲೆ' ತಡೆಗಟ್ಟಲು ಈ ಕ್ರಮಗಳ ಪಾಲನೆ ಕಡ್ಡಾಯ :...

BIG NEWS : ರಾಜ್ಯದಲ್ಲಿ ‘ಮಂಗನ ಖಾಯಿಲೆ’ ತಡೆಗಟ್ಟಲು ಈ ಕ್ರಮಗಳ ಪಾಲನೆ ಕಡ್ಡಾಯ : ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಮಂಗನ ಕಾಯಿಲೆ ತಡೆಗಟ್ಟಲು ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳ ಕುರಿತು ಸರ್ಕಾರ ಆದೇಶ ಹೊರಡಿಸಿದೆ.

ಏನಿದೆ ಸರ್ಕಾರದ ಆದೇಶದಲ್ಲಿ..?

ಕ್ಯಾಸನೂರು ಫಾರೆಸ್ಟ್ ಡಿಸೀಸ್ (ಕೆ.ಎಫ್.ಡಿ.) ಅಥವಾ ಮಂಗನ ಕಾಯಿಲೆಯು ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಹರಡುವ ವೈರಾಣು ರೋಗವಾಗಿದ್ದು, ಸಾಮಾನ್ಯವಾಗಿ ನವೆಂಬರ್ನಿಂದ ಜೂನ್ ತಿಂಗಳ ಅವಧಿಯಲ್ಲಿ ಕಂಡುಬರುತ್ತದೆ. ಪ್ರಸ್ತುತ, ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆಯಾಗಲಿ ಲಸಿಕೆಯಾಗಲಿ ಲಭ್ಯವಿರುವುದಿಲ್ಲ. ಈ ಹಿನ್ನಲೆಯಲ್ಲಿ ರೋಗವನ್ನು ತಡೆಗಟ್ಟುವುದು ಮತ್ತು ರೋಗವನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಿ ಸಂಭವನೀಯ ಮರಣಗಳನ್ನು ತಡೆಗಟ್ಟುವುದು ಅತ್ಯಂತ ಅವಶ್ಯಕವಾಗಿದ್ದು, ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೈಗೊಳ್ಳಬೇಕಾದ ಕ್ರಮಗಳು

  1. ಮಂಗಗಳ ಅಸಾಮಾನ್ಯ ಸಾವಿನ ಘಟನೆಗಳು ಕೆಎಫ್ಡಿ ಹರಡುವಿಕೆಯ ಪ್ರಾಥಮಿಕ ಸೂಚಕಗಳಾಗಿರುವುದರಿಂದ, ಸಮುದಾಯ ಹಾಗೂ ಅರಣ್ಯ ಸಿಬ್ಬಂದಿಗಳಿಂದ ಮಂಗಗಳ ಸಾವಿನ ಮಾಹಿತಿಯನ್ನು ಸಂಗ್ರಹಿಸತಕ್ಕದ್ದು. ಇದಕ್ಕಾಗಿ ಅರಣ್ಯ ಇಲಾಖೆಯೊಂದಿಗೆ ಸಮನ್ವಯತೆ ಮತ್ತು ಗ್ರಾಮ ಮಟ್ಟದಲ್ಲಿ ಸಮುದಾಯದೊಂದಿಗೆ ಸಂವಹನ ನಡೆಸಿ ನೈಜ ಸಮಯದಲ್ಲಿ (real time) ಮಂಗಗಳ ಸಾವಿನ ವರದಿಯು ಲಭ್ಯವಾಗುವಂತೆ ಕ್ರಮವಹಿಸುವುದು.
  2. ಮಂಗಗಳ ಅಸಾಮಾನ್ಯ ಸಾವು ವರದಿಯಾದ 2 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಸಕ್ರಿಯ ಸಮೀಕ್ಷೆಯನ್ನು ಕನಿಷ್ಠ 21 ದಿನಗಳವರೆಗೆ ಕೈಗೊಳ್ಳುವುದು.
  3. ಎಲ್ಲಾ ಸಂಶಯಾಸ್ಪದ ಜ್ವರ ಪ್ರಕರಣಗಳನ್ನು ‘ಪ್ರಕರಣ ವ್ಯಾಖ್ಯಾನ’ದ ಪ್ರಕಾರ ಗುರುತಿಸಿ, ಪರೀಕ್ಷೆಗೆ ಒಳಪಡಿಸುವುದು ಹಾಗೂ ಸಂಗ್ರಹಿಸಲಾದ ರಕ್ತದ ಮಾದರಿಗಳನ್ನು 24 ಗಂಟೆಯ ಒಳಗೆ VDL ಶಿವಮೊಗ್ಗಕ್ಕೆ ತಲುಪಿಸುವುದು.
  4. ಧೃಡಪಟ್ಟ ಮಾನವ ಕೆಎಫ್ಡಿ ಪ್ರಕರಣ ವರದಿಯಾದ ಸಂದರ್ಭದಲ್ಲಿ, ಪ್ರಕರಣ ವರದಿಯಾದ ಸ್ಥಳೀಯ ಪ್ರದೇಶದಲ್ಲಿ ಸಕ್ರಿಯ ಸಮೀಕ್ಷೆಯನ್ನು ಕನಿಷ್ಠ 21 ದಿನಗಳವರೆಗೆ (ಕೊನೆಯ ರೋಗಿಯ ರೋಗಲಕ್ಷಣಗಳು ಪ್ರಾರಂಭವಾದ ದಿನಾಂಕದಿಂದ) ಮುಂದುವರೆಸುವುದು ಮತ್ತು ಮಂಗನ ಧೃಡಪಟ್ಟ ಪ್ರಕರಣ ವರದಿಯಾದ ಸಂದರ್ಭದಲ್ಲಿ ಪ್ರಕರಣ ವರದಿಯಾದ ಸ್ಥಳದ 5 ಕಿ.ಮೀ. ವ್ಯಾಪ್ತಿಯ ಪ್ರದೇಶಗಳಲ್ಲಿ ಸಕ್ರಿಯ ಸಮೀಕ್ಷೆಯನ್ನು ತಕ್ಷಣವೇ ಪ್ರಾರಂಭಿಸಿ, ಪ್ರಸ್ತುತ ರೋಗಪ್ರಸರಣದ ಅವಧಿ ಮುಗಿಯುವವರೆಗೂ (ಸಾಮಾನ್ಯವಾಗಿ ಮೇ/ಜೂನ್ವರೆಗೆ) ಮುಂದುವರೆಸುವುದು.
  5. ಎಲ್ಲಾ KFD ಧೃಡೀಕೃತ ಪ್ರಕರಣಗಳನ್ನು ಆಸ್ಪತ್ರೆಗೆ ದಾಖಲಿಸುವುದು ಕಡ್ಡಾಯವಾಗಿದ್ದು, ರೋಗ ಪ್ರಸರಣದ ಅವಧಿಯಲ್ಲಿ ತಾಲ್ಲೂಕು ಆಸ್ಪತ್ರೆಗಳಲ್ಲಿ KFD ಮೀಸಲು ವಾರ್ಡನ್ನು ತೆರೆಯುವುದು. ಅಲ್ಲದೆ, ಕೆ.ಎಂ.ಸಿ. ಮಣಿಪಾಲ, SIMS ಶಿವಮೊಗ್ಗ, KRIMS ಕಾರವಾರ ಆಸ್ಪತ್ರೆಗಳನ್ನು ರೆಫರಲ್ ಆಸ್ಪತ್ರೆಗಳನ್ನಾಗಿ ಗುರುತಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ತಡಮಾಡದೆ ರೋಗಿಗಳನ್ನು ಹತ್ತಿರದ ರೆಫರಲ್ ಕೇಂದ್ರಕ್ಕೆ ಸಾಗಿಸಿ ಮರಣ ಸಂಭವಿಸದಂತೆ ತಡೆಗಟ್ಟುವುದು.
  6. ರೋಗಿಗಳನ್ನು ಮನೆಯಿಂದ ಆಸ್ಪತ್ರೆಗೆ ಅಥವಾ ರೆಫರಲ್ ಕೇಂದ್ರಕ್ಕೆ ಸಾಗಿಸಲು ಅಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸುವುದು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular