HomeHealthಮಧುಮೇಹ ಸಮಸ್ಯೆಗೆ ಇದು ರಾಮಬಾಣ ಮಾವಿನ ಎಲೆ

ಮಧುಮೇಹ ಸಮಸ್ಯೆಗೆ ಇದು ರಾಮಬಾಣ ಮಾವಿನ ಎಲೆ

ಮಾವಿನ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮಾತ್ರವಲ್ಲ, ಶುಭ ಸಮಾರಂಭದ ವೇಳೆ ತೋರಣ ಕಟ್ಟಲು ಬಳಸುವ ಅದರ ಎಲೆಯಲ್ಲಿಯೂ ಕೂಡ ಆರೋಗ್ಯ ಸಮಸ್ಯೆಗೆ ಪರಿಹಾರ ಅಡಗಿದೆ. ಮಧುಮೇಹ ಸಮಸ್ಯೆಗೆ ಇದು ರಾಮಬಾಣ ಅಂತಲೇ ಹೇಳಬಹುದು. ಈ ಎಲೆಗಳಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬಹುದು ಅಂತ ನೀವೂ ತಿಳಿಯಿರಿ.

* 10 ರಿಂದ 15 ಮಾವಿನ ಎಲೆಗಳನ್ನು ತೆಗೆದುಕೊಂಡು ಸ್ವಚ್ಚ ಮಾಡಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ರಾತ್ರಿಯಿಡಿ ಅದೇ ನೀರಿನಲ್ಲಿ ಎಲೆಗಳನ್ನು ಬಿಡಿ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಎಲೆಗಳನ್ನು ತೆಗೆದು ಆ ನೀರನ್ನು ಕುಡಿಯಿರಿ. ಎರಡು ಅಥವಾ ಮೂರು ತಿಂಗಳ ಕಾಲ ಈ ರೀತಿ ಮಾಡಿದರೆ ಮಧುಮೇಹ ನಿಯತ್ರಣದಲ್ಲಿರುತ್ತದೆ.

* ಮಾವಿನ ಎಲೆಗಳನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತರ ಅದನ್ನು ಪುಡಿ ಮಾಡಿ. ಪ್ರತಿದಿನ ಒಂದು ಚಮಚ ಈ ಪುಡಿಯನ್ನು ಸೇವನೆ ಮಾಡುವುದರಿಂದ ಸಕ್ಕರೆ ಪ್ರಮಾಣ ನಿಯಂತ್ರಣಕ್ಕೆ ಬರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಮಾವುಗಳ ಎಲೆಯ ಚಹಾ ಕುಡಿದರೆ ಜ್ವರ, ಭೇದಿ, ನಿದ್ರಾಹೀನತೆ, ಉಬ್ಬಿರುವ ರಕ್ತನಾಳಗಳು, ಅಸ್ತಮಾ, ಗಂಟಲೂತ ಮತ್ತು ಶೀತಗಳಂತಹ ಹಲವಾರು ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ಈ ಎಲೆಗಳು ರಕ್ತದ ಒತ್ತಡ ಕಡಿಮೆ ಮಾಡಿ ರಕ್ತನಾಳಗಳನ್ನು ಬಲಪಡಿಸುವಲ್ಲಿ ಸಹಾಯ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular