HomeEntertainment'DJ tillu' ಚಿತ್ರ ತೆರೆ ಮೇಲೆ ಬಂದು ಇಂದಿಗೆ ಎರಡು ವರ್ಷ

‘DJ tillu’ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಎರಡು ವರ್ಷ

ವಿಮಲ್ ಕೃಷ್ಣ ನಿರ್ದೇಶನದ ರೋಮ್ಯಾಂಟಿಕ್ ಕ್ರೈಂ ಕಾಮಿಡಿ ಕಥಾಧಾರಿತ ‘DJ tillu’ ಚಿತ್ರವನ್ನು 2022 ಫೆಬ್ರವರಿ 12ರಂದು ಬಿಡುಗಡೆ ಮಾಡಲಾಗಿತ್ತು. ಈ ಚಿತ್ರ ತೆರೆ ಮೇಲೆ ಬಂದು ಇಂದಿಗೆ ಎರಡು ವರ್ಷಗಳಾಗಿವೆ. ಈ ಸಂತಸವನ್ನು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದೆ.

ಈ ಸಿನಿಮಾದಲ್ಲಿ ಸಿದ್ದು ಹಾಗೂ ಸ್ಯಾಂಡಲ್ ವುಡ್ ನ ನೇಹಾ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದು, ಬ್ರಹ್ಮಾಜಿ, ಫಿಶ್ ವೆಂಕಟ್, ಪ್ರಗತಿ, ಶ್ರೀನಿವಾಸ್, ರಾಜ ರವಿಂದ್ರ ಮುರುಳಿಧರ್ ಗೌಡ್, ಹಾಗೂ ಪ್ರಣಿತ್ ರೆಡ್ಡಿ ಉಳಿದ ಪಾತ್ರವರ್ಗದಲ್ಲಿದ್ದಾರೆ. ಸಿತಾರ ಎಂಟರ್ಟೈನ್ಮೆಂಟ್ ಮತ್ತು ಫಾರ್ಚುನ್ ಫೋರ್ ಸಿನಿಮಾಸ್ ಬ್ಯಾನರ್ ನಡಿ ಸೂರ್ಯದೇವರ ನಾಗವಂಶಿ ನಿರ್ಮಾಣ ಮಾಡಿದ್ದಾರೆ. ನವೀನ್ ನೂಲಿ ಸಂಕಲನವಿದ್ದು, ತಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular