HomeInternationalBIG BREAKING: ಸಿರಿಯಾ ಮೇಲೆ ಇಸ್ರೇಲ್ ಪಡೆಗಳ ದಾಳಿ; ಹಲವರ ಸಾವು

BIG BREAKING: ಸಿರಿಯಾ ಮೇಲೆ ಇಸ್ರೇಲ್ ಪಡೆಗಳ ದಾಳಿ; ಹಲವರ ಸಾವು

ಇಸ್ರೇಲ್ ಪಡೆಗಳು ಕಳೆದ ರಾತ್ರಿ ಸಿರಿಯಾ ಮೇಲೆ ವಾಯು ದಾಳಿ ನಡೆಸಿದ್ದು, ಇದರ ಪರಿಣಾಮ ಹಲವರು ಸಾವನ್ನಪ್ಪಿರುವುದಲ್ಲದೆ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ಮಾಧ್ಯಮ ವರದಿಗಳು ತಿಳಿಸಿವೆ.

ಭಾನುವಾರ ಮಧ್ಯರಾತ್ರಿ 12.20ರ ಸುಮಾರಿಗೆ ಸಿರಿಯಾ ನಗರವಾದ ಅಲೆಪ್ಪೋದ ಕಟ್ಟಡಗಳ ಮೇಲೆ ಈ ವಾಯು ದಾಳಿ ನಡೆಸಲಾಗಿದ್ದು, ಆಸ್ತಿ ಪಾಸ್ತಿಯೂ ಹಾನಿಗೀಡಾಗಿದೆ. ಅಲ್ಲದೆ ಹಲವು ನಾಗರೀಕರು ಸಾವನ್ನಪ್ಪಿರುವುದಾಗಿ ಸ್ಥಳೀಯ ಮಾಧ್ಯಮ ಹೇಳಿದೆ.

ಈ ಮೊದಲು ಮೇ 29 ರಂದು ಸಿರಿಯಾದ ಕರಾವಳಿ ನಗರ ಬನಿಯಸ್ ಮೇಲೆ ಇಸ್ರೇಲ್ ಪಡೆಗಳು ವಾಯು ದಾಳಿ ನಡೆಸಿದ್ದು, ಇದರಲ್ಲಿ ಓರ್ವ ಬಾಲಕ ಸಾವನ್ನಪ್ಪಿ ಹಲವು ಮಂದಿ ನಾಗರೀಕರು ಸಾವಿಗೀಡಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular