HomeHealthಅತಿಯಾದ ಮಸಾಲೆಯುಕ್ತ ಆಹಾರ ಸೇವಿಸಿ ಹೊಟ್ಟೆ ಭಾರವಾಗಿದೆಯಾ...? ಸಮಸ್ಯೆ ನಿವಾರಣೆಗೆ ಇವುಗಳನ್ನು ಸೇವಿಸಿ

ಅತಿಯಾದ ಮಸಾಲೆಯುಕ್ತ ಆಹಾರ ಸೇವಿಸಿ ಹೊಟ್ಟೆ ಭಾರವಾಗಿದೆಯಾ…? ಸಮಸ್ಯೆ ನಿವಾರಣೆಗೆ ಇವುಗಳನ್ನು ಸೇವಿಸಿ

ಅತಿಯಾದ ಖಾರ, ಮಸಾಲೆಯುಕ್ತ ಆಹಾರಗಳನ್ನು ಸೇವಿಸಿದಾಗ ಹೊಟ್ಟೆ ಕೆಡಬಹುದು. ಸೆಳೆತ, ಮಲಬದ್ಧತೆ ಸಮಸ್ಯೆ ಕಾಡಬಹುದು.

ಈ ಸಮಸ್ಯೆಗಳನ್ನು ನಿವಾರಿಸಿ ಕರುಳನ್ನು ಆರೋಗ್ಯಗೊಳಿಸಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಳ್ಳಿ.

*ಅರಶಿನ : ಕರುಳಿನ ಕ್ರಮಬದ್ಧತೆ ಮತ್ತು ಚಲನಶೀಲತೆಯನ್ನು ಹೆಚ್ಚಿಸುತ್ತದೆ. ಇದು ಮಲಬದ್ಧತೆಯನ್ನು ತಡೆಯುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

*ಶುಂಠಿ : ಇದು ವಾಕರಿಕೆಯನ್ನು ನಿವಾರಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಿ ಪಿತ್ತರಸ, ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

*ಏಲಕ್ಕಿ : ಕರುಳಿನ ಕೆಟ್ಟ ಬ್ಯಾಕ್ಟೀರಿಯಾ ನಾಶ ಮಾಡಿ ಕರುಳಿನ ಹುಣ್ಣುಗಳನ್ನು ಬರದಂತೆ ತಡೆಯುತ್ತದೆ. ಜೀರ್ಣಕ್ರಿಯೆ ಮತ್ತು ಚಯಾಪಚಯವನ್ನು ಹೆಚ್ಚಿಸುತ್ತದೆ.

*ಪುದೀನಾ : ಜೀರ್ಣಕಾರಿಗೆ ಅಡಚಣೆಯಾಗುವ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಗ್ಯಾಸ್ ಮತ್ತು ಹೊಟ್ಟೆ ಉಬ್ಬಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular