HomeIndiaಹೀಗೂ ಉಂಟೇ..? : ‘ಮಟನ್’ ಸಾಂಬಾರಿನಲ್ಲಿ ಮೂಳೆ ಬಡಿಸಿಲ್ಲ ಎಂದು ಮದುವೆ ರದ್ದು ಮಾಡಿದ ವರನ...

ಹೀಗೂ ಉಂಟೇ..? : ‘ಮಟನ್’ ಸಾಂಬಾರಿನಲ್ಲಿ ಮೂಳೆ ಬಡಿಸಿಲ್ಲ ಎಂದು ಮದುವೆ ರದ್ದು ಮಾಡಿದ ವರನ ಕಡೆಯವರು.!

ತೆಲಂಗಾಣ : ಮಟನ್ ಸಾಂಬಾರ್ ನಲ್ಲಿ ಮೂಳೆ ಬಡಿಸದೇ ಅವಮಾನ ಮಾಡಿದ್ದಾರೆ ಎಂದು ಗಂಡಿನ ಕಡೆಯವರು ಮದುವೆಯನ್ನೇ ರದ್ದು ಮಾಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಮಟನ್ ವಿಚಾರಕ್ಕೆ ಗಂಡು ಹಾಗೂ ಹೆಣ್ಣಿನ ಕುಟುಂಬದವರ ನಡುವೆ ನಡೆದ ಜಗಳ ತಾರಕಕ್ಕೇರಿ ಮದುವೆ ಮುರಿದು ಬಿದ್ದಿದೆ.

ಇತ್ತೀಚೆಗೆ ಬಿಡುಗಡೆಯಾದ ತೆಲುಗು ಚಿತ್ರ ‘ಬಾಲಗಂ’ ನಲ್ಲಿನ ಜನಪ್ರಿಯ ದೃಶ್ಯ ನಿಮಗೆ ಗೊತ್ತಿರಬಹುದು. ಚಲನಚಿತ್ರದ ದೃಶ್ಯದಲ್ಲಿ, ಮಟನ್ ನಲ್ಲಿ ಮೂಳೆ , ಮಜ್ಜೆಯ ಬಗ್ಗೆ ವರ ಮತ್ತು ವಧುವಿನ ಕಿರಿಯ ಸಹೋದರನ ನಡುವಿನ ಗಲಾಟೆ ಮದುವೆ ನಿಲ್ಲುವುದಕ್ಕೆ ಕಾರಣವಾಗುತ್ತದೆ. ಅದೇ ರೀತಿ ಸಿನಿಮೀಯ ರೀತಿಯಲ್ಲಿ ಮದುವೆ ಮುರಿದು ಬಿದ್ದ ಘಟನೆ ತೆಲಂಗಾಣದಲ್ಲಿ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಿಜಾಮಾಬಾದ್ ಜಿಲ್ಲೆಯವರಾದ ವಧುವಿನ ಕುಟುಂಬ ಸದಸ್ಯರು ಮತ್ತು ಜಗ್ತಿಯಾಲ್ ಜಿಲ್ಲೆಯವರಾದ ವರನ ಕಡೆಯವರು ಮದುವೆಯನ್ನು ಫಿಕ್ಸ್ ಮಾಡಿದ್ದರು. ನಿಶ್ಚಿತಾರ್ಥವು ಇತ್ತೀಚೆಗೆ ವಧುವಿನ ನಿವಾಸದಲ್ಲಿ ನಡೆದಿತ್ತು.
ಎರಡೂ ಕುಟುಂಬಗಳು ಮದುವೆಯನ್ನು ಸಾಂಪ್ರದಾಯಿಕವಾಗಿ ಮತ್ತು ಅದ್ದೂರಿಯಾಗಿ ನಡೆಸುತ್ತಿದ್ದವು, ವಧುವಿನ ಕುಟುಂಬವು ಮದುಮಗನ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಮಾಂಸಾಹಾರಿ ಊಟದ ವ್ಯವಸ್ಥೆ ಮಾಡಿತ್ತು, ಎಲ್ಲವೂ ಸುಗಮವಾಗಿ ನಡೆಯುತ್ತಿತ್ತು , ಆದರೆ ಇದ್ದಕ್ಕಿದ್ದಂತೆ ಅತಿಥಿಗಳು ವಧುವಿನ ಮನೆಯವರು ಮಾಂಸಾಹಾರದಲ್ಲಿ ಮೂಳೆಯನ್ನು ನೀಡದೆ ಅವಮಾನ ಮಾಡಿದ್ದಾರೆ ಎಂದು ಗಲಾಟೆ ಮಾಡಿದ್ದಾರೆ. ಅಲ್ಲಿಂದ ಶುರುವಾದ ಜಗಳ ತಾರಕಕ್ಕೇರಿ ಕೊನೆಗೆ ಮದುವೆಯೇ ಮುರಿದು ಬಿದ್ದಿದೆ. ಈ ವಿಚಾರ ತಿಳಿದ ಊರು ಮನೆಯವರು ಶಾಕ್ ಆಗಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular