ಇವನು ಮಗನೋ..ರಾಕ್ಷಸನೋ : ಹೆತ್ತ ಅಪ್ಪ-ಅಮ್ಮನಿಗೆ ಥಳಿಸಿ, ಒದ್ದ ಕಟುಕ..! Video Viral

ಆಂಧ್ರಪ್ರದೇಶ : ಆಸ್ತಿ ಕೊಡಲಿಲ್ಲ ಎಂದು ಹೆತ್ತ ಅಪ್ಪ ಅಮ್ಮನಿಗೆ ಮಗನೋರ್ವ ಥಳಿಸಿ, ಜಾಡಿಸಿ ಒದ್ದ ಅಮಾನವೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಸದ್ಯ, ಈ ವಿಡಿಯೋ ವೈರಲ್ ಆಗಿದ್ದು, ಪ್ರಪಂಚದಲ್ಲಿ ಇಂತಹ ಕೆಟ್ಟ ಮಕ್ಕಳು ಇರ್ತಾರಲ್ಲ..? ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿಯಲ್ಲಿ ಈ ಘಟನೆ ನಡೆದಿದೆ. ಆಸ್ತಿ ವಿವಾದದ ಹಿನ್ನೆಲೆ ಶ್ರೀನಿವಾಸುಲು ರೆಡ್ಡಿ ತನ್ನ ವಯಸ್ಸಾದ ಪೋಷಕರಾದ ವೆಂಕಟ ರಮಣ ರೆಡ್ಡಿ ಮತ್ತು ಲಕ್ಷ್ಮಮ್ಮ ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ವೀಡಿಯೊದಲ್ಲಿ ಈತ ತನ್ನ ತಾಯಿಯನ್ನು ಕೂದಲಿನಿಂದ ಎಳೆದುಕೊಂಡು, ಹೊಡೆಯುವುದು, ನಂತರ ಹತ್ತಿರದಲ್ಲೇ ಕುಳಿತಿದ್ದ ತಂದೆಗೆ ಕಪಾಳಮೋಕ್ಷ ಮಾಡುವುದು ಮತ್ತು ನಂತರ ತಾಯಿಯನ್ನು ಅನೇಕ ಬಾರಿ ಒದೆಯುತ್ತಾನೆ. ಈ ವಿಡಿಯೋವನ್ನು ಯಾರೋ ಪೊಲೀಸರಿಗೆ ತೋರಿಸಿದ್ದು, ನಂತರ ಮಗನನ್ನು ಪೊಲೀಸರು ಒದ್ದು ಜೈಲಿಗೆ ಹಾಕಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read