HomeLatest Newsಇರಾನ್ ವಿರುದ್ಧದ ಯುದ್ಧಕ್ಕೆ ಎಂದು ಅಂತ್ಯ ? ಟ್ರಂಪ್ ಕೊಟ್ಟರು ಬಿಗ್ ಅಪ್‌ಡೇಟ್.!

ಇರಾನ್ ವಿರುದ್ಧದ ಯುದ್ಧಕ್ಕೆ ಎಂದು ಅಂತ್ಯ ? ಟ್ರಂಪ್ ಕೊಟ್ಟರು ಬಿಗ್ ಅಪ್‌ಡೇಟ್.!

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕು ಎಂಬ ನಿರ್ಧಾರವು ಅಮೆರಿಕ ಮತ್ತು ಇಸ್ರೇಲ್ ನಡುವಿನ ‘ಪರಸ್ಪರ’ ತೀರ್ಮಾನವಾಗಿರುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಚರ್ಚಿಸಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಅವರು ತಿಳಿಸಿದ್ದಾರೆ.\ದಿ ಟೈಮ್ಸ್ ಆಫ್ ಇಸ್ರೇಲ್’ ಪತ್ರಿಕೆಗೆ ನೀಡಿದ ಕಿರು ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, “ನಾನು ಮತ್ತು ನೆತನ್ಯಾಹು ಇಲ್ಲದಿದ್ದರೆ ಇಸ್ಲಾಮಿಕ್ ರಾಷ್ಟ್ರವಾದ ಇರಾನ್ ಇಷ್ಟೊತ್ತಿಗಾಗಲೇ ಇಸ್ರೇಲ್ ಅನ್ನು ನಾಶಪಡಿಸುತ್ತಿತ್ತು” ಎಂದು ಪ್ರತಿಪಾದಿಸಿದ್ದಾರೆ.

ಯುದ್ಧದ ಅಂತ್ಯದ ಬಗ್ಗೆ ತಾವೊಬ್ಬರೇ ನಿರ್ಧಾರ ತೆಗೆದುಕೊಳ್ಳುತ್ತೀರಾ ಅಥವಾ ನೆತನ್ಯಾಹು ಅವರ ಪಾತ್ರವೂ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, “ನಾನು ಇದನ್ನು ಪರಸ್ಪರ ನಿರ್ಧಾರ ಎಂದು ಭಾವಿಸುತ್ತೇನೆ. ನಾವು ಈ ಬಗ್ಗೆ ನಿರಂತರವಾಗಿ ಮಾತನಾಡುತ್ತಿದ್ದೇವೆ. ಸರಿಯಾದ ಸಮಯದಲ್ಲಿ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆ, ಆದರೆ ಪ್ರತಿಯೊಂದು ವಿಷಯವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು” ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆತನ್ಯಾಹುಗೆ ಶ್ಲಾಘನೆ: ನೆತನ್ಯಾಹು ಅವರನ್ನು ಶ್ಲಾಘಿಸಿದ ಟ್ರಂಪ್, “ಬಿಬಿ (ನೆತನ್ಯಾಹು) ಅದ್ಭುತ ಕೆಲಸ ಮಾಡಿದ್ದಾರೆ. ಅವರು ಒಬ್ಬ ಸಮರ್ಥ ಯುದ್ಧಕಾಲದ ಪ್ರಧಾನಿ. ನಾವಿಬ್ಬರೂ ಸೇರಿ ಇಸ್ರೇಲ್ ಅನ್ನು ನಾಶಮಾಡಲು ಸಂಚು ರೂಪಿಸಿದ್ದ ದೇಶವನ್ನೇ ಧ್ವಂಸಗೊಳಿಸಿದ್ದೇವೆ” ಎಂದು ಹೇಳಿದ್ದಾರೆ.

ಇರಾನ್‌ನ ಮುಂದಿನ ನಾಯಕನ ಬಗ್ಗೆ ಎಚ್ಚರಿಕೆ: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಅವರನ್ನು ಮುಂದಿನ ನಾಯಕನನ್ನಾಗಿ ಘೋಷಿಸಿರುವ ಕುರಿತು ಪ್ರತಿಕ್ರಿಯಿಸಿದ ಟ್ರಂಪ್, “ಶ್ವೇತಭವನದ ಅನುಮೋದನೆ ಇಲ್ಲದಿದ್ದರೆ ಇರಾನ್‌ನ ಮುಂದಿನ ನಾಯಕ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ” ಎಂದು ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಆಯತೊಲ್ಲಾ ಅಲಿ ಖಮೇನಿ ಹತರಾಗಿದ್ದರು. ಈ ದಾಳಿಯಲ್ಲಿ ಇದುವರೆಗೆ 6 ಅಮೆರಿಕನ್ನರು ಮತ್ತು 1,000 ಕ್ಕೂ ಹೆಚ್ಚು ಇರಾನಿಯನ್ನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.”ಒಂದು ವೇಳೆ ನಾನು ಮತ್ತು ನೆತನ್ಯಾಹು ಅಧಿಕಾರದಲ್ಲಿ ಇಲ್ಲದಿದ್ದರೆ, ಇಂದು ಇಸ್ರೇಲ್ ಎಂಬ ದೇಶವೇ ಅಸ್ತಿತ್ವದಲ್ಲಿ ಇರುತ್ತಿರಲಿಲ್ಲ” ಎಂದು ಟ್ರಂಪ್ ತಮ್ಮ ಮತ್ತು ಇಸ್ರೇಲ್ ನಡುವಿನ ನಿಕಟ ಸಂಬಂಧವನ್ನು ಪುನರುಚ್ಚರಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular