ಮನೆಯಲ್ಲಿ ಕಪ್ಪು ಇಲಿ ಸಂಖ್ಯೆ ಹೆಚ್ಚಾಗ್ತಿದೆಯಾ…..? ಇರಬಹುದು ಈ ಬಗ್ಗೆ ಸೂಚನೆ

ಹಿಂದೂ ಧರ್ಮದಲ್ಲಿ ಮನುಷ್ಯ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷ್ಯದ ಬಗ್ಗೆ ಹೇಳಲಾಗಿದೆ. ಅದೃಷ್ಟ, ದುರಾದೃಷ್ಟ, ಶುಭ, ಅಶುಭ ಸೇರಿದಂತೆ ಎಲ್ಲ ಸಂಗತಿಯನ್ನು ಇಲ್ಲಿ ವಿವರಿಸಲಾಗಿದೆ. ಮನುಷ್ಯನ ಜೀವನದಲ್ಲಿ ಮುಂದಾಗುವ ಘಟನೆಗಳ ಬಗ್ಗೆ ಪ್ರಾಣಿಗಳು ಸೂಚನೆ ನೀಡುತ್ತವೆಯಂತೆ. ಇದನ್ನೂ ವಿವರವಾಗಿ ಹೇಳಲಾಗಿದೆ.

ಮನೆಯಲ್ಲಿರುವ ಪ್ರಾಣಿಗಳು, ಮನೆಯ ಹೊರಗಿರುವ ಪ್ರಾಣಿಗಳು ಸೇರಿದಂತೆ ಇರುವೆ ಕೂಡ ಮುಂದಾಗುವ ಶುಭ, ಅಶುಭ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ.

ಮನೆಯ ಮುಖ್ಯ ದ್ವಾರಕ್ಕೆ ಮುಖ ಹಾಕಿ ನಾಯಿ ಅಳುತ್ತಿದ್ದರೆ ಇದು ಅಶುಭ. ಮುಂದೆ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದರ್ಥ. ಮನೆಯಲ್ಲಿ ಸಾವು ಸಂಭವಿಸುವ ಸಾಧ್ಯತೆಯೂ ಇರುತ್ತದೆ.

ಮನೆಯಲ್ಲಿ ಇಲಿಗಳ ಸಂಖ್ಯೆ ಏಕಾಏಕಿ ಹೆಚ್ಚಾದ್ರೆ ಅದು ಒಳ್ಳೆಯದಲ್ಲ. ಒಂದೆರಡಿದ್ದ ಕಪ್ಪು ಇಲಿಗಳ ಸಂಖ್ಯೆ ಏಕಾಏಕಿ 10-15 ಆದ್ರೆ ಆಪತ್ತು ಕಟ್ಟಿಟ್ಟ ಬುತ್ತಿ. ಸದ್ಯದಲ್ಲಿಯೇ ಸಮಸ್ಯೆ ನಿಮ್ಮನ್ನು ಕಾಡಲಿದೆ ಎಂದರ್ಥ.

ಭೂಮಿಯನ್ನು ಅಗೆಯುತ್ತಿದ್ದ ವೇಳೆ ಸತ್ತ ಪ್ರಾಣಿ ಅಥವಾ ಹಾವು ಕಂಡ್ರೆ ಅಶುಭ. ಮುಂದಿನ ದಿನಗಳಲ್ಲಿ ಕೆಟ್ಟ ಘಟನೆ ನಡೆಯಲಿದೆ ಎಂಬುದರ ಸಂಕೇತ. ದೊಡ್ಡ ನಷ್ಟಕ್ಕೆ ಇದು ಕಾರಣವಾಗಬಹುದು.

ಮನೆಯ ಮುಂದೆ ಗಾಯಗೊಂಡ ಪಕ್ಷಿ ಬಂದು ಬಿದ್ರೆ ಇದು ಕೂಡ ಅಶುಭ. ಮುಂದಿನ ದಿನಗಳಲ್ಲಿ ಕೆಟ್ಟ ಘಟನೆ ನಡೆಯಲಿದೆ ಎಂದರ್ಥ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read