ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗಿದೆಯಾ….?

ವಯಸ್ಸಾದ ಮೇಲೆ ಕೂದಲು ಬೂದು ಬಣ್ಣಕ್ಕೆ ತಿರುತ್ತದೆ. ಆದರೆ ಕೆಲವರಿಗೆ ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗುತ್ತದೆ ಇದಕ್ಕೆ ಹಲವು ಕಾರಣಗಳಿವೆ. ಆ ಕಾರಣಗಳು ಏನೆಂಬುದನ್ನು ತಿಳಿದು ಕೂದಲು ಬೇಗ ಬಿಳಿಯಾಗುವದನ್ನು ತಡೆಯಿರಿ.

*ಧೂಮಪಾನ : ಧೂಮಪಾನ ಮಾಡುವುದರಿಂದ ನಿಮ್ಮ ಕೂದಲು ಬೇಗ ಬಿಳಿಯಾಗುತ್ತದೆ. ಸಿಗರೇಟಿನಲ್ಲಿ ಹೆಚ್ಚಿನ ಮಟ್ಟದ ಫ್ರಿ ರಾಡಿಕಲ್ಸ್ ಇರುವುದರಿಂದ ಇದು ಸಂಭವಿಸುತ್ತದೆ ಎನ್ನಲಾಗಿದೆ.

*ಮಾಲಿನ್ಯ : ವಾತಾವರಣದಲ್ಲಿರುವ ಕಲುಷಿತ ಗಾಳಿಯಲ್ಲಿರುವ ಮಾಲಿನ್ಯಕಾರಕಗಳು ಕೂದಲು ಬಿಳಿಯಾಗುವಂತೆ ಮಾಡುತ್ತದೆ.

*ಒತ್ತಡ : ಒತ್ತಡವು ಹೆಚ್ಚಿನ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡುತ್ತದೆ. ಇದು ಕೂದಲು ಉದುರಲು ಮಾತ್ರವಲ್ಲ ಕೂದಲು ಬೆಳ್ಳಗಾಗುವಂತೆ ಮಾಡುತ್ತದೆ.

*ಹಾರ್ಮೋನ್ : ಹಾರ್ಮೋನ್ ಬದಲಾವಣೆಯಾದಾಗ ನಿಮ್ಮ ಕೂದಲಿನ ವಿನ್ಯಾಸ, ಸಾಂದ್ರತೆ ಮತ್ತು ಬಣ್ಣಗಳಲ್ಲಿ ಬದಲಾವಣೆಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read