ಕೂದಲುದುರುವ ಸಮಸ್ಯೆಯೇ…..? ಮಾಡಿ ನೋಡಿ ಈ ʼಮನೆ ಮದ್ದುʼ

ಕೂದಲುದುರುವುದು ಈಗ ದೊಡ್ಡ ಸಮಸ್ಯೆ. ಕಲುಷಿತವಾಗ್ತಿರುವ ವಾತಾವರಣ ಬೊಕ್ಕ ತಲೆಗೆ ಕಾರಣವಾಗ್ತಾ ಇದೆ. ಕೂದಲುದುರುವ ಸಮಸ್ಯೆಗೆ ಮುಕ್ತಿ ಹಾಡಲು ಜನರು ಏನೆಲ್ಲ ಪ್ರಯತ್ನಪಡ್ತಾರೆ. ಆದ್ರೆ ಸಮಸ್ಯೆ ಮಾತ್ರ ಕಡಿಮೆಯಾಗೋದಿಲ್ಲ. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ನಿಮ್ಮ ತಲೆ ಕೂಡ ಬೊಕ್ಕಾಗ್ತಿದ್ದರೆ ಚಿಂತೆ ಬೇಡ.

ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ ವೃದ್ಧಿಸುವ ಅಡುಗೆ ಮನೆಯಲ್ಲಿರುವ ವಸ್ತುಗಳಲ್ಲಿ ಶುಂಠಿ ಕೂಡ ಒಂದು. ಕೇವಲ ಆರೋಗ್ಯ, ಆಹಾರಕ್ಕೆ ಮಾತ್ರವಲ್ಲ, ಕೂದಲುದುರುವ ಸಮಸ್ಯೆಗೂ ಶುಂಠಿ ಒಳ್ಳೆ ಮದ್ದು. ಶುಂಠಿ ಕೂದಲುದುರುವುದನ್ನು ಕಡಿಮೆ ಮಾಡುವ ಜೊತೆಗೆ ಹೊಳಪುಳ್ಳ ಹೇರಳ ಕೂದಲು ಬೆಳೆಯಲು ನೆರವಾಗುತ್ತದೆ.

ಒಂದು ಚಮಚ ಶುಂಠಿ ರಸಕ್ಕೆ ಆಲಿವ್ ಆಯಿಲ್ ಹಾಕಿ. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಮೊದಲ ಬಾರಿಯೇ ಇದರ ಪರಿಣಾಮ ನಿಮಗೆ ಗೊತ್ತಾಗಲು ಶುರುವಾಗುತ್ತದೆ.

ಕೂದಲಿನ ಎಲ್ಲ ಸಮಸ್ಯೆಗಳಿಗೂ ಶುಂಠಿ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ಎರಡು ಚಮಚ ಶುಂಠಿ ರಸಕ್ಕೆ ಮೂರು ಚಮಚ ಆಲಿವ್ ಆಯಿಲ್ ಹಾಗೂ ಒಂದೆರಡು ಹನಿ ನಿಂಬೆ ಹಣ್ಣಿನ ಹನಿಯನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. 20-25 ನಿಮಿಷ ಬಿಟ್ಟು ತೊಳೆಯಿರಿ.

ಕಲುಷಿತ ಗಾಳಿ, ಧೂಳು, ಕೆಲಸದ ಒತ್ತಡಗಳಿಂದಾಗಿ ಕೂದಲು ನಿರ್ಜೀವವಾಗುತ್ತದೆ. ಒಣಗಿದ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಒಣಗಿದ ಕೂದಲಿನ ಸಮಸ್ಯೆ ಎದುರಿಸುತ್ತಿರುವವರು ಎರಡು ಚಮಚ ಶುಂಠಿ ರಸಕ್ಕೆ ಒಂದೆರಡು ಹನಿ ನಿಂಬೆ ರಸವನ್ನು ಹಾಕಿ ಕೂದಲಿಗೆ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ.

ತಾಜಾ ಶುಂಠಿಯನ್ನು ಬಳಕೆ ಮಾಡುವುದು ಒಳ್ಳೆಯದು. ಶುಂಠಿ ಪುಡಿ ಬಳಸಿದ್ರೆ ಹಾನಿಯಿಲ್ಲ. ಆದ್ರೆ ತಾಜಾ ಶುಂಠಿಯಲ್ಲಿ ನ್ಯೂಟ್ರಿಶಿಯನ್ ಅಂಶ ಜಾಸ್ತಿ ಇರುವುದರಿಂದ ತಕ್ಷಣ ಪರಿಣಾಮ ಕಾಣಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read