ನಿಯಮ ಬಾಹಿರವಾಗಿ ಟೆಂಡರ್ ಲಕೋಟೆ ತೆರೆದು ಬಿಡ್ ದರ ತಿದ್ದುಪಡಿ: ಅಮಾನತು

ಚಿತ್ರದುರ್ಗ: ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಯಮ(ಕೆ.ಟಿ.ಪಿ.ಪಿ)ಉಲ್ಲಂಘಿಸಿ, ನಿಯಮ ಬಾಹಿರವಾಗಿ ಟೆಂಡರ್ ಲಕೋಟೆ ತರೆದು ಆರ್ಥಿಕ ಬಿಡ್ ದರ ತಿದ್ದುಪಡಿ ಮಾಡಿದ ಆರೋಪದ ಮೇಲೆ ಜಿಲ್ಲಾ ಪಂಚಾಯಿತಿ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕಿ ಆಯೇಷಾ ಸಿದ್ದಿಖಾ ಅವರನ್ನು ಅಮಾನತುಗೊಳಿಸಿ ಜಿ.ಪಂ. ಸಿಇಒ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.

2024-25ನೇ ಸಾಲಿನ ಅಕ್ಷರ ದಾಸೋಹ ಕಾರ್ಯಕ್ರಮ ಅನುಷ್ಠಾನ ಸಂಬಂಧವಾಗಿ ಇಲಾಖೆ ಉಪಯೋಗಕ್ಕೆ ಬಾಡಿಗೆ ಆಧಾರದ ಮೇಲೆ ಹೊರ ಮೂಲ ಸಂಸ್ಥೆಯಿಂದ ವಾಹನ ಸೇವೆ ಪಡೆಯಲು ಟೆಂಡರ್ ಕರೆಯಲಾಗಿತ್ತು. ಈ ಟೆಂಡರ್ ಪ್ರಕ್ರಿಯೆಯಲ್ಲಿ, ಕೆ.ಟಿ.ಪಿ.ಪಿ ನಿಯಮ ಉಲಂಘಿಸಿ ಎಫ್.ಡಿ.ಎ ಆಯೇಷಾ ಸಿದ್ದಿಖಾ ಟೆಂಡರ್ ಲಕೋಟೆಗಳನ್ನು ತರೆದಿರುತ್ತಾರೆ. ಆರ್ಥಿಕ ಬಿಡ್ ದರ ತಿದ್ದುಪಡಿ ಮಾಡಿ, ನಂತರ ತಿದ್ದುಪಡಿ ಮಾಡಿರುವ ಪ್ರತಿಗಳನ್ನು ಸಹ ಕಡತದಿಂದ ತೆಗೆದು ಹಾಕಿರುತ್ತಾರೆ. ಈ ಕುರಿತು ಪರಿಶೀಲಿಸಿ ಜಿ.ಪಂ.ಮುಖ್ಯ ಲೆಕ್ಕಾಧಿಕಾರಿಗಳು ವರದಿ ನೀಡಿದ್ದರು. ಇದನ್ನು ಆಧರಿಸಿ ಜಿ.ಪಂ. ಸಿಇಒ ಎಸ್.ಜೆ. ಸೋಮಶೇಖರ್ ಕೆ.ಸಿ.ಎಸ್. ನಿಯಮಾವಳಿ ಅನ್ವಯ ವಿಚಾರಣೆಗೆ ಕಾಯ್ದಿರಿಸಿ, ಆಯೇಷಾ ಸಿದ್ದಿಖಾ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read