HomeLatest Newsಕಾರ್ಖಾನೆಯಲ್ಲಿ ದುರಂತ; ಕಬ್ಬಿಣದ ಪ್ಲೇಟ್ ಬಿದ್ದು ಕಾರ್ಮಿಕ ದುರ್ಮರಣ

ಕಾರ್ಖಾನೆಯಲ್ಲಿ ದುರಂತ; ಕಬ್ಬಿಣದ ಪ್ಲೇಟ್ ಬಿದ್ದು ಕಾರ್ಮಿಕ ದುರ್ಮರಣ

ಬೆಂಗಳೂರು: ಕಾರ್ಖಾನೆಯಲ್ಲಿ ಕಬ್ಬಿಣದ ಪ್ಲೇಟ್ ಬಿದ್ದು ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಮಾರುತಿ ಫ್ಯಾಬ್ ಟೆಕ್ ನಲ್ಲಿ ನಡೆದಿದೆ.

19 ವರ್ಷದ ವಗಾಸ್ ಮೃತ ಕಾರ್ಮಿಕ. ಇನ್ನೋರ್ವ ಅಹದ್ ಅಯಬ್ (23) ಗೆ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಮಿಕರ ಸುರಕ್ಷತೆಗಾಗಿ ಕಾರ್ಖಾನೆ ಯಾವುದೇ ಉಪಕರಣಗಳನ್ನು ಕೊಟ್ಟಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆ ವಿರುದ್ಧ ದಾಬಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular