HomeKarnatakaBIG NEWS: ಇರಾನ್-ಇಸ್ರೇಲ್ ಯುದ್ಧ: ಬೆಂಗಳೂರು ಏರ್​ಪೋರ್ಟ್​ನಲ್ಲಿ 15 ವಿಮಾನಗಳು ರದ್ದು

BIG NEWS: ಇರಾನ್-ಇಸ್ರೇಲ್ ಯುದ್ಧ: ಬೆಂಗಳೂರು ಏರ್​ಪೋರ್ಟ್​ನಲ್ಲಿ 15 ವಿಮಾನಗಳು ರದ್ದು

ಬೆಂಗಳೂರು: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹಲವು ದೇಶಗಳಲ್ಲಿ ವಿಮಾನ ಹಾರಾಟ ರದ್ದಾಗಿವೆ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ 15 ವಿಮಾನಗಳು ರದ್ದಾಗಿವೆ.

ಯುದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಟ್ಟು 15 ವಿಮಾನಗಳು ರದ್ದಾಗಿವೆ. ವಿದೇಶಗಳಿಂದ ಆಗಮಿಸಬೇಕಿದ್ದ 09 ಹಾಗೂ ಬೆಂಗಳೂರಿನಿಂದ ನಿರ್ಗಮಿಸಬೇಕಿದ್ದ 06 ವಿಮಾನಗಳು ಕಾರ್ಯಾಚರಣೆ ಸ್ಥಗಿತಗೊಳಿಸಿವೆ.

ದುಬೈ, ಅಬುಧಾಬಿ, ಜಿದ್ದಾ, ದೋಹಾ, ಡಮಾಮ್ ಹಾಗೂ ರಿಯಾದ್ ಸಂಪರ್ಕಿತ ವಿಮಾನಗಳು ರದ್ದಾಗಿವೆ. ಎಮಿರೇಟ್ಸ್, ಕತಾರ್ ಏರ್ವೇಸ್, ಏರ್ ಇಂಡಿಯಾ ಎಕ್ಸ್ಪ್ರೆಸ್, ಇಂಡಿಗೋ ಮತ್ತು ಎತಿಹಾದ್ ಏರ್ವೇಸ್ ವಿಮಾನಗಳು ಸೇವೆ ನಿಲ್ಲಿಸಿವೆ. ಆಗಮಿಸಬೇಕಿದ್ದ ವಿಮಾನಗಳಲ್ಲಿ 1,533 ಪ್ರಯಾಣಿಕರು ಹಾಗೂ ನಿರ್ಗಮಿಸಬೇಕಿದ್ದ ವಿಮಾನಗಳಲ್ಲಿ 806 ಮಂದಿ ಟಿಕೆಟ್ ಬುಕ್ ಮಾಡಿದ್ದು, ರದ್ದತಿ ಬಗ್ಗೆ ಮುಂಚಿತವಾಗಿ ಪ್ರಯಾಣಿಕರಿಗೆ ಮಾಹಿತಿ ನೀಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular