HomeInternationalಕಡ್ಡಾಯ ಹಿಜಾಬ್ ನಿಯಮಕ್ಕೆ ಬಹಿರಂಗ ಸವಾಲು: ಇರಾನ್‌ನಲ್ಲಿ ಹಿಜಾಬ್ ಧರಿಸದೆ 10ಕೆ ರೇಸ್‌ನಲ್ಲಿ ಓಡಿದ ಮಹಿಳೆಯರು

ಕಡ್ಡಾಯ ಹಿಜಾಬ್ ನಿಯಮಕ್ಕೆ ಬಹಿರಂಗ ಸವಾಲು: ಇರಾನ್‌ನಲ್ಲಿ ಹಿಜಾಬ್ ಧರಿಸದೆ 10ಕೆ ರೇಸ್‌ನಲ್ಲಿ ಓಡಿದ ಮಹಿಳೆಯರು

ಇರಾನ್‌ನ ಕಡ್ಡಾಯ ಹಿಜಾಬ್ ನಿಯಮಗಳ ವಿರುದ್ಧ ದೇಶಾದ್ಯಂತ ಮಹಿಳೆಯರ ಪ್ರತಿಭಟನೆ ಮತ್ತು ಸಾರ್ವಜನಿಕ ಧೋರಣೆಯಲ್ಲಿ ಆಗುತ್ತಿರುವ ಬದಲಾವಣೆಗೆ ಸಾಕ್ಷಿಯಾಗುವಂತಹ ಘಟನೆಯೊಂದು ನಡೆದಿದೆ. ತೆಹ್ರಾನ್‌ನ ವೆಲಾಯತ್ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ‘ತೆಹ್ರಾನ್ ೧೦ಕೆ’ ರೋಡ್ ರೇಸ್‌ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಹಿಜಾಬ್ ಧರಿಸದೆ ಓಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿವೆ.

ಈ ಕ್ರೀಡಾಕೂಟವನ್ನು ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ ಹಲವಾರು ಮಹಿಳೆಯರು ತೆರೆದ ಕೂದಲಿನೊಂದಿಗೆ ಓಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸುವುದು ಕಾನೂನುಬದ್ಧವಾಗಿ ಕಡ್ಡಾಯವಾಗಿರುವುದರಿಂದ, ಈ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿವೆ. ಹಿಂದೆ ಕಿಶ್ ದ್ವೀಪದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಹಿಜಾಬ್ ಇಲ್ಲದೆ ಭಾಗವಹಿಸಿದ್ದ ಮಹಿಳೆಯರು ಹಾಗೂ ಆಯೋಜಕರ ವಿರುದ್ಧ ಇರಾನ್ ಸರ್ಕಾರ ಕಠಿಣ ಕ್ರಮ ಕೈಗೊಂಡಿತ್ತು.

೨೦೨೨ರಲ್ಲಿ ಮಹ್ಸಾ ಅಮೀನಿ ಅವರ ಮರಣದ ನಂತರ ಇರಾನ್‌ನಲ್ಲಿ ಕಡ್ಡಾಯ ಹಿಜಾಬ್ ವಿರುದ್ಧ ಮಹಿಳೆಯರು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದು, ರಸ್ತೆಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ. ಸರ್ಕಾರದ ಕಟ್ಟುನಿಟ್ಟಿನ ನಿಯಮಗಳ ನಡುವೆಯೂ ಸಾರ್ವಜನಿಕವಾಗಿ ಮಹಿಳೆಯರು ಈ ರೀತಿ ಭಾಗವಹಿಸಿರುವುದು ದೊಡ್ಡ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ. ಇನ್ನು ಈ ೧೦ ಕಿಲೋಮೀಟರ್ ಓಟದ ಸ್ಪರ್ಧೆಯಲ್ಲಿ ಇರಾನ್‌ನ ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರಸಿದ್ಧ ಓಟಗಾರ್ತಿ ಪರೀಸಾ ಅರಬ್ ಪ್ರಥಮ ಸ್ಥಾನ ಪಡೆದು ಗೆಲುವು ಸಾಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular