HomeKarnatakaBIG NEWS: ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಬೆಟ್ಟಿಂಗ್ ದಂಧೆ; ಇಬ್ಬರು ಬುಕ್ಕಿಗಳು ಅರೆಸ್ಟ್

BIG NEWS: ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಬೆಟ್ಟಿಂಗ್ ದಂಧೆ; ಇಬ್ಬರು ಬುಕ್ಕಿಗಳು ಅರೆಸ್ಟ್

ಬೆಂಗಳೂರು: ಐಪಿಎಲ್ ಶುರುವಾದ ಬೆನ್ನಲ್ಲೇ ಬೆಟ್ಟಿಂಗ್ ಹಾವಳಿ ಕೂಡ ಜೋರಾಗಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬುಕ್ಕಿಗಳಾದ ಸಂಜೀವ್ ಕುಮಾರ್ ಬೆಹರಾ ಹಾಗೂ ಪವನ್ ಬಂಧಿತ ಆರೋಪಿಗಳು. ಏಪ್ರಿಲ್ 2ರಂದು ಲಕ್ನೋ ಸೂಪರ್ ಜೈಂಟ್ಸ್ ,ಮತ್ತು ಆರ್ ಸಿಬಿ ಪಂದ್ಯಗಳ ವೇಳೆ ಪ್ರೇಕ್ಷಕರ ರೀತಿ ಕುಳಿತು ಬೆಟ್ಟಿಂಗ್ ನಡೆಸುತ್ತಿದ್ದರು.

ಅಲ್ಲದೇ ಕೆಲ ಆಪ್ ಗಳು ಹಾಗೂ ಫೋನ್ ಮೂಲಕವೂ ಲಕ್ಷಾಂತರ ರೂಪಾಯಿ ಬೆಟ್ಟಿಂಗ್ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸ್ಟೇಡಿಯಂ ನಲ್ಲಿ ಕುಳಿತು ಕ್ರಿಕೆಟ್ ನೋಡುವುದಕ್ಕೂ ಟಿ.ವಿಯಲ್ಲಿ ನೋಡುವುದಕ್ಕೂ 40 ಸೆಕೆಂಡ್ ಗಳ ಅಂತರವಿರುತ್ತದೆ. ಹಾಗಾಗಿ ಸ್ಟೇಡಿಯಂ ನಲ್ಲೇ ಕುಳಿತು ಫೋನ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಇಬ್ಬರು ಬುಕ್ಕಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular