HomeIPL 2026IPL 2026: ರಾಜಸ್ಥಾನ್ ವಿರುದ್ಧ ರನ್ ಗಳಿಸಲು ಪರದಾಡುತ್ತಿರುವ ಮುಂಬೈ; ಹಿಡಿಶಾಪ ಹಾಕಿದ ಪಂಜಾಬ್, ಕೆಕೆಆರ್...

IPL 2026: ರಾಜಸ್ಥಾನ್ ವಿರುದ್ಧ ರನ್ ಗಳಿಸಲು ಪರದಾಡುತ್ತಿರುವ ಮುಂಬೈ; ಹಿಡಿಶಾಪ ಹಾಕಿದ ಪಂಜಾಬ್, ಕೆಕೆಆರ್ ಪಂದ್ಯ ನೋಡೋದೂ ವೇಸ್ಟೇ!

ಇಂದು ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಐಪಿಎಲ್ 2026ರ ಲೀಗ್ ಹಂತದ 69ನೇ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.

ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿದೆ. ಮುಂಬೈ ಇಂಡಿಯನ್ಸ್ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದರೆ ರಾಜಸ್ಥಾನ್ ರಾಯಲ್ಸ್ 16 ಅಂಕಗಳನ್ನು ಹೊಂದಿ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳಲಿದೆ. ಅಲ್ಲಿಗೆ ಪಂಜಾಬ್ ಎಲಿಮಿನೇಟ್ ಆಗಲಿದೆ ಹಾಗೂ ಸಂಜೆಯ ಕೆಕೆಆರ್ ಪಂದ್ಯ ನೋಡುವುದೂ ಸಹ ವೇಸ್ಟ್ ಎನಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಒಂದು ವೇಳೆ ಈ ಮೊತ್ತವನ್ನು ಮುಂಬೈ ಇಂಡಿಯನ್ಸ್ ಚೇಸ್ ಮಾಡಿದರೆ, ರಾಜಸ್ಥಾನ್ ರಾಯಲ್ಸ್ 14 ಅಂಕಗಳ ಜತೆ ಎಲಿಮಿನೇಟ್ ಆಗಲಿದೆ. ಅಲ್ಲದೇ ಸಂಜೆ ನಡೆಯುವ ಪಂದ್ಯದಲ್ಲಿ ಏನಾದರೂ ಡೆಲ್ಲಿ ವಿರುದ್ಧ ಕೆಕೆಆರ್ ಗೆದ್ದು ಪಂಜಾಬ್‌ನ ಹಾಗೆ 15 ಅಂಕ ಪಡೆದರೆ ನೆಟ್ ರನ್ ರೇಟ್ ಮೇಲೆ ಪ್ಲೇಆಫ್‌ಗೆ ತಂಡದ ಆಯ್ಕೆ ನಡೆಯಲಿದೆ.

ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲ್ಲಲಿ ಎಂದು ಬೇಡಿಕೊಳ್ಳುತ್ತಿದ್ದರೆ, ರಾಜಸ್ಥಾನ್ ರಾಯಲ್ಸ್ ತಂಡದ ಅಭಿಮಾನಿಗಳು ತಮ್ಮ ತಂಡ ಗೆದ್ದು ನೇರವಾಗಿ ಪ್ಲೇಆಫ್ ತಲುಪಲಿ ಎನ್ನುತ್ತಿದ್ದಾರೆ.

ಆದರೆ ರಾಜಸ್ಥಾನ್ ರಾಯಲ್ಸ್ ನೀಡಿದ ಗುರಿ ಬೆನ್ನಟ್ಟಿರುವ ಮುಂಬೈ ಇಂಡಿಯನ್ಸ್ ಕೇವಲ 34 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಇಷ್ಟು ಬೇಗನೆ ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್‌ ರೈಡರ್ಸ್ ಹಿಡಿ ಶಾಪ ಹಾಕಿದ್ದು, ನಂತರದ ಬ್ಯಾಟ್ಸ್‌ಮನ್‌ಗಳಾದರೂ ಚೆನ್ನಾಗಿ ಆಡಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

ಮುಂಬೈ ಪರ ರೋಹಿತ್ ಶರ್ಮಾ ಡಕ್‌ಔಟ್ ಆದರೆ, ರಯಾನ್ ರಿಕೆಲ್ಟನ್ 12, ನಮನ್ ಧೀರ್ 6 ಹಾಗೂ ತಿಲಕ್ ವರ್ಮಾ 3 ರನ್ ಗಳಿಸಿದ್ದಾರೆ. ಹೀಗೆ 5.1 ಓವರ್‌ಗಳಲ್ಲಿ 38ಕ್ಕೆ 4 ವಿಕೆಟ್ ಕಳೆದುಕೊಂಡಿರುವ ಮುಂಬೈ ಇಂಡಿಯನ್ಸ್ ಪರ ಐದನೇ ವಿಕೆಟ್‌ಗೆ ಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್ ್ಒಂದಾಗಿದ್ದು, ಈ ಜೊಡಿ ಕೈ ಹಿಡಿಯಲಿದೆಯಾ ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular