HomeLatest NewsIPL 2026: ಕಾಲಿಗೆ ತಾಗಿದ ಯಶಸ್ವಿ ಜೈಸ್ವಾಲ್ ಬ್ಯಾಟ್; ವೈಭವ್ ಸೂರ್ಯವಂಶಿ ಮಾಡಿದ ಕೆಲಸಕ್ಕೆ ನೆಟ್ಟಿಗರು...

IPL 2026: ಕಾಲಿಗೆ ತಾಗಿದ ಯಶಸ್ವಿ ಜೈಸ್ವಾಲ್ ಬ್ಯಾಟ್; ವೈಭವ್ ಸೂರ್ಯವಂಶಿ ಮಾಡಿದ ಕೆಲಸಕ್ಕೆ ನೆಟ್ಟಿಗರು ಫಿದಾ

ಸೋಮವಾರ ( ಮಾರ್ಚ್ 30 ) ಗುವಾಹಟಿಯ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.4 ಓವರ್‌ಗಳಲ್ಲಿ ಕೇವಲ 127 ರನ್‌ಗಳಿಗೆ ಔಟ್ ಆಗಿ ರಾಜಸ್ಥಾನ್ ರಾಯಲ್ಸ್‌ಗೆ 128 ರನ್‌ಗಳ ಸುಲಭ ಗುರಿಯನ್ನು ನೀಡಿತ್ತು. ಈ ಗುರಿಯನ್ನು ವೈಭವ್ ಸೂರ್ಯವಂಶಿ ಅಬ್ಬರದ ಅರ್ಧಶತಕದ ನೆರವಿನಿಂದ ಕೇವಲ 12.1 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ರಾಜಸ್ಥಾನ್ ರಾಯಲ್ಸ್ ಕಲೆಹಾಕಿತ್ತು.

ವೈಭವ್ ಸೂರ್ಯವಂಶಿ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಐಪಿಎಲ್‌ನಲ್ಲಿ ವೇಗವಾಗಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಐಪಿಎಲ್‌ನ ಈ ಆವೃತ್ತಿಯ ಮೊದಲ ಪಂದ್ಯದಲ್ಲಿಯೇ ತನ್ನ ಅಬ್ಬರದ ಆಟದ ಪ್ರದರ್ಶನವನ್ನು ತೋರಿದ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದರು. ವೈಭವ್ ಸೂರ್ಯವಂಶಿ ಮೈದಾನದಲ್ಲಿ ಅಬ್ಬರಿಸಿದ್ದು ಮಾತ್ರವಲ್ಲದೇ ಆತ ತನ್ನ ಸಹ ಆಟಗಾರ ಯಶಸ್ವಿ ಜೈಸ್ವಾಲ್ ಜತೆ ನಡೆದುಕೊಂಡ ರೀತಿ ಸದ್ಯ ನೆಟ್ಟಿಗರ ಮನಗೆದ್ದಿದೆ.

ಪಂದ್ಯದ ವೇಳೆ ಮಾತನಾಡಿ ವಾಪಸ್ ಆಟವನ್ನಾಡಲು ತೆರಳುವಾಗ ಆಕಸ್ಮಿಕವಾಗಿ ಯಶಸ್ವಿ ಜೈಸ್ವಾಲ್ ಹಿಡಿದಿದ್ದ ಬ್ಯಾಟ್ ವೈಭವ್ ಸೂರ್ಯವಂಶಿ ಬ್ಯಾಟ್‌ಗೆ ತಾಗಿದೆ. ಹೀಗೆ ಕ್ರಿಕೆಟಿಗನ ಪಾಲಿಗೆ ಅಮೂಲ್ಯವಾದ ಬ್ಯಾಟ್ ಕಾಲಿಗೆ ತಾಗಿದ್ದನ್ನು ಗಮನಿಸಿದ ವೈಭವ್ ಸೂರ್ಯವಂಶಿ ಹಿಂದಿರುಗಿ ಯಶಸ್ವಿ ಜೈಸ್ವಾಲ್ ಬ್ಯಾಟ್ ಸ್ಪರ್ಶಿಸಿ ನಮಸ್ಕರಿಸಿದ್ದಾರೆ.

ವೈಭವ್ ಸೂರ್ಯವಂಶಿ ಈ ನಡೆಯನ್ನು ಪ್ರಶಂಸಿಸಿರುವ ನೆಟ್ಟಿಗರು ಆತನ ಈ ನಡವಳಿಕೆಯೇ ಆತನ ಇಂದಿನ ಯಶಸ್ಸಿಗೆ ಪ್ರಮುಖ ಕಾರಣ ಎಂದು ಬರೆದುಕೊಂಡು ವಿಡಿಯೊ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular