ಇಂದು ( ಮೇ 29 ) ಮುಲ್ಲಾನ್‌ಪುರದ ಮಹಾರಾಜ ಯದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಎರಡನೇ ಕ್ವಾಲಿಫಯರ್ ಪಂದ್ಯ ನಡೆಯುತ್ತಿದ್ದು, ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರಾಜಸ್ಥಾನ್ ರಾಯಲ್ಸ್ ಒಂದೊಳ್ಳೆ ಟಾರ್ಗೆಟ್ ನೀಡುವತ್ತ ಸಾಗಿದೆ. ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 97 ರನ್ ಬಾರಿಸಿ ಅಬ್ಬರಿಸಿದ್ದ ವೈಭವ್ ಸೂರ್ಯವಂಶಿ ಈ ಪಂದ್ಯದಲ್ಲೂ ಅಂಥಹದ್ದೇ ಇನ್ನಿಂಗ್ಸ್ ಆಡಿ ತಂಡಕ್ಕೆ ಆಸರೆಯಾಗಿದ್ದಾರೆ.
ಒಂದೆಡೆ ತಂಡ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ ಮತ್ತೊಂದೆಡೆ ಏಕಾಂಗಿ ಹೋರಾಟ ನಡೆಸಿದ ವೈಭವ್ ಸೂರ್ಯವಂಶಿ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 96 ರನ್ ಬಾರಿಸಿದರು. ಈ ಮೂಲಕ ಸತತ ಎರಡನೇ ಬಾರಿಗೆ ಶತಕವನ್ನು ಮಿಸ್ ಮಾಡಿಕೊಂಡರು.
ವೈಭವ್ ಸೂರ್ಯವಂಶಿಯ ಈ ಇನ್ನಿಂಗ್ಸ್‌ನಿಂದಾಗಿಯೇ ರಾಜಸ್ಥಾನ್ ಇಂದಿನ ಪಂದ್ಯದಲ್ಲಿ ಒಂದೊಳ್ಳೆ ಗುರಿ ನೀಡಲು ಸಾಧ್ಯವಾಗಿದ್ದು, ಈ ಚಿಕ್ಕ ವಯಸ್ಸಿಗೇ ವೈಭವ್ ಈ ಮಟ್ಟಿಗೆ ಪ್ರದರ್ಶನ ನೀಡುತ್ತಿರುವುದನ್ನು ಕಂಡು ಕ್ರಿಕೆಟ್ ಪ್ರೇಮಿಗಳು ಬೆರಗಾಗಿದ್ದಾರೆ. ಲೀಗ್ ಹಂತದ ಪಂದ್ಯಗಳಲ್ಲಿ ಸರಿ, ಪ್ಲೇಆಫ್ ಪಂದ್ಯಗಳಲ್ಲೂ ಈ ರೀತಿಯ ಆಟ ಆಡುವುದು ಸಾಮಾನ್ಯದ ಮಾತಲ್ಲ ಎಂದು ಕ್ರಿಕೆಟ್ ಪ್ರೇಮಿಗಳು ವೈಭವ್ ಆಟಕ್ಕೆ ತಲೆ ಬಾಗಿದ್ದಾರೆ.

