HomeIPL 20267 ವರ್ಷದವನಿದ್ದಾಗಲೇ ಹೇಗಿತ್ತು ನೋಡಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರ; ವಿಡಿಯೊ

7 ವರ್ಷದವನಿದ್ದಾಗಲೇ ಹೇಗಿತ್ತು ನೋಡಿ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಅಬ್ಬರ; ವಿಡಿಯೊ

ಯುವ ಕ್ರಿಕೆಟಿಗರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಇರುವ ಅಮೋಘ ವೇದಿಕೆ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್. ಈ ಫ್ರಾಂಚೈಸಿ ಕ್ರಿಕೆಟ್‌ ಲೀಗ್‌ನಲ್ಲಿ ಹೆಸರು ಮಾಡಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಯ್ಕೆಯಾದ ಆಟಗಾರರು ಹಲವಾರು ಮಂದಿ ಇದ್ದಾರೆ.

ಹೀಗೆ ಹೆಸರು ಮಾಡಿದ ಆಟಗಾರರ ಪಟ್ಟಿಗೆ ಹೊಸತಾಗಿ ಸೇರ್ಪಡೆಗೊಂಡು ಹೆಚ್ಚು ಸದ್ದು ಮಾಡಿದ ಆಟಗಾರನೆಂದರೆ ಅದು 15 ವರ್ಷದ ವೈಭವ್ ಸೂರ್ಯವಂಶಿ. ಕಳೆದ ವರ್ಷದ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿ ಮೊದಲ ಆವೃತ್ತಿಯಲ್ಲಿಯೇ ಶತಕ ಬಾರಿಸಿ ತನ್ನ ಸಾಮರ್ಥ್ಯವನ್ನು ಸಾರಿ ಹೇಳಿದ್ದ ವೈಭವ್ ಸೂರ್ಯವಂಶಿ ಈ ವರ್ಷ ಕಳೆದ ವರ್ಷಕ್ಕಿಂತ ನೈಪುಣ್ಯತೆಯಿಂದ ಬ್ಯಾಟ್ ಬೀಸುತ್ತಿದ್ದಾರೆ.

ಸದ್ಯ ಈ ಬಾರಿಯ ಟೂರ್ನಿಯಲ್ಲಿ ಆಡಿರುವ ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಅಬ್ಬರಿಸಿರುವ ವೈಭವ್ ಸೂರ್ಯವಂಶಿ 200 ರನ್ ಪೂರೈಸಿ ಆರೆಂಜ್ ಕ್ಯಾಪ್ ಪಡೆದುಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಮ್ಮ ತಂಡದ ಚೊಚ್ಚಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅರ್ಧಶತಕ ಬಾರಿಸಿದ್ದ ವೈಭವ್ ನಿನ್ನೆ ( ಏಪ್ರಿಲ್ 10 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸಹ ಅರ್ಧಶತಕ ಚಚ್ಚಿ ಪಂದ್ಯಶ್ರೇ‍ಷ್ಠ ಪ್ರಶಸ್ತಿ ಪಡೆದುಕೊಂಡರು.

ಹೀಗೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಬುಮ್ರಾ, ಭುವನೇಶ್ವರ್, ಹೇಜಲ್‌ವುಡ್ ರೀತಿಯ ಬೌಲರ್‌ಗಳನ್ನೇ ಕಾಡಿರುವ ವೈಭವ್ ಸೂರ್ಯವಂಶಿ ಬಾಲ್ಯದ ಕುರಿತ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಏಳು ವರ್ಷದ ವೈಭವ್ ಸೂರ್ಯಂಶಿ ನೆಟ್‌ನಲ್ಲಿ ಹೇಗೆ ಅಭ್ಯಾಸ ನಡೆಸುತ್ತಿದ್ದರು ಎಂಬ ವಿಡಿಯೊ ಹರಿದಾಡಿದೆ.

ಈ ವಿಡಿಯೊದಲ್ಲಿ ಪುಟ್ಟ ವೈಭವ್ ಆ ವಯಸ್ಸಿನಲ್ಲಿಯೇ ಗಟ್ಟಿಯಾಗಿ ಬ್ಯಾಟ್ ಹಿಡಿದು ದೊಡ್ಡ ಹೊಡೆತಗಳನ್ನು ಬಾರಿಸುವ ಅಭ್ಯಾಸ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular