HomeIPL 2026ಎಮ್ಮೆ ಥರ ಬಬಲ್‌ ಗಮ್ ತಿಂತಾನೆ ಬ್ಯಾಟಿಂಗ್ ಬರಲ್ಲ, ಮಾನ ಮರ್ಯಾದೆ ಇದ್ರೆ ರಿಟೈರ್‌ಮೆಂಟ್ ತಗೊ,...

ಎಮ್ಮೆ ಥರ ಬಬಲ್‌ ಗಮ್ ತಿಂತಾನೆ ಬ್ಯಾಟಿಂಗ್ ಬರಲ್ಲ, ಮಾನ ಮರ್ಯಾದೆ ಇದ್ರೆ ರಿಟೈರ್‌ಮೆಂಟ್ ತಗೊ, ಮುಂಬೈ ಗೆಲ್ಲುವ ಪಂದ್ಯ ಸೋಲಿಸದೆಯಲ್ಲ ಎಂದ ನೆಟ್ಟಿಗರು!

ನಿನ್ನೆ ( ಮೇ 24 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಲೀಗ್ ಹಂತದ 69ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯ ಸೋಲನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆರಿಸಿಕೊಂಡು ರಾಜಸ್ಥಾನ್ ರಾಯಲ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡಕ್ಕೆ 206 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಈ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ 16 ಅಂಕಗಳೊಂದಿಗೆ ಪ್ಲೇಆಫ್ ಸುತ್ತಿಗೆ ಅರ್ಹತೆ ಪಡೆದುಕೊಂಡ ರಾಜಸ್ಥಾನ್ ರಾಯಲ್ಸ್ ಬೆಂಗಳೂರು, ಗುಜರಾತ್ ಹಾಗೂ ಹೈದರಾಬಾದ್ ಜತೆ ಪ್ಲೇಆಫ್ ತಲುಪಿದ್ದು, ಹೈದರಬಾದ್ ಜತೆ ಎಲಿಮಿನೇಟರ್ ಆಡಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ರಾಜಸ್ಥಾನ್ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ವೇಗವಾಗಿ 34 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿತಾದರೂ ಐದನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್ 38 ಎಸೆತಗಳಲ್ಲಿ 63 ರನ್‌ಗಳ ಜತೆಯಾಟಟವನ್ನಾಡಿ ತಂಡಕ್ಕೆ ಆತ್ಮವಿಶ್ವಾಸ ಮೂಡಿಸಿದರು. 18 ಎಸೆತಗಳಲ್ಲಿ 33 ರನ್ ಬಾರಿಸಿದ್ದ ಜಾಕ್ಸ್ ಔಟ್ ಆದರೆ, ನಂತರ ಕಣಕ್ಕಿಳಿದ ನಾಯಕ ಪಾಂಡ್ಯ ವೇಗವಾಗಿ 15 ಎಸೆತಗಳಲ್ಲಿ 34 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಬೆನ್ನಲ್ಲೇ ಕಾರ್ಬಿನ್ ಬಾಷ್ 2 ರನ್‌ಗೆ ನಿರ್ಗಮಿಸಿದರೆ, ಗೆಲುವಿಗಾಗಿ ಆಡಬೇಕಿದ್ದ ಸೂರ್ಯಕುಮಾರ್ ಯಾದವ್ 42 ಎಸೆತಗಳಲ್ಲಿ 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.

ಪಂದ್ಯದಲ್ಲಿ ಹಾಗೂ ಕ್ರಿಕೆಟ್‌ನಲ್ಲಿ ಅನುಭವ ಹೊಂದಿದ್ದ ಸೂರ್ಯಕುಮಾರ್ ಯಾದವ್ ಡೆತ್ ಓವರ್‌ನಲ್ಲಿ ಅಬ್ಬರಿಸಿ ಪಂದ್ಯ ಗೆಲ್ಲಿಸದೇ ಎಸೆತಗಳನ್ನು ವ್ಯರ್ಥ ಮಾಡಿ ನಿರಾಸೆ ಮೂಡಿಸಿದರು. ಇಂತಹ ಪಂದ್ಯದಲ್ಲಿ 142 ಸ್ಟ್ರೈಕ್ ರೇಟ್‌ನೊಂದಿಗೆ ಇನ್ನಿಂಗ್ಸ್ ಮುಗಿಸಿದ ಸೂರ್ಯಕುಮಾರ್ ಯಾದವ್ ಪಂದಯ್ ಗೆಲ್ಲಿಸಲಿದ್ದಾರೆ ಎಂಬ ನಿರೀಕ್ಷೆ ಹಲವರಲ್ಲಿ ಇತ್ತಾದರೂ ಆ ಕೆಲಸವನ್ನು ಮಾಡದೇ ಫ್ಲಾಪ್ ಆದರು.

ಹೀಗೆ ಮಕಾಡೆ ಮಲಗಿದ ಸೂರ್ಯಕುಮಾರ್ ಯಾದವ್‌ಗೆ ಟ್ರೋಲ್‌ಗಳ ಸುರಿಮಳೆ ಸುರಿದಿದ್ದು, ಎಮ್ಮೆಯ ಹಾಗೆ ಬಬಲ್ ಗಮ್ ತಿನ್ನುವುದನ್ನು ಬಿಟ್ಟು ಈತನಿಗೆ ಇನ್ನೇನು ಬರಲಿದೆ, ಮಾನ ಮರ್ಯಾದೆ ಇದ್ರೆ ರಿಟೈರ್‌ಮೆಂಟ್ ಕೊಟ್ಟು ಮನೆಗೆ ಹೋಗಿ ಎಂದಿದ್ದಾರೆ. ಕೇವಲ ಐಪಿಎಲ್ ಎಂದಲ್ಲ, ಕಳೆದ ಟಿಟ್ವೆಂಟಿ ವಿಶ್ವಕಪ್‌ನಲ್ಲೂ ಸಹ ಈತನ ಪ್ರದರ್ಶನ ಹೀಗೆಯೇ ಇತ್ತು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular