HomeIPL 2026IPL 2026: ಸನ್‌ರೈಸರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೆಕೆಆರ್; ಬೃಹತ್ ಗೆಲುವು ಸಾಧಿಸಿದ ಹೈದರಾಬಾದ್

IPL 2026: ಸನ್‌ರೈಸರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಕೆಕೆಆರ್; ಬೃಹತ್ ಗೆಲುವು ಸಾಧಿಸಿದ ಹೈದರಾಬಾದ್

ಕೊಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ ಆರನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 65 ರನ್‌ಗಳ ಗೆಲುವನ್ನು ದಾಖಲಿಸಿ ಟೂರ್ನಿಯಲ್ಲಿ ಜಯದ ಖಾತೆ ತೆರೆದಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಫೀಲ್ಡಿಂಗ್ ಆರಿಸಿಕೊಂಡು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 226 ರನ್ ಕಲೆಹಾಕಿ ಕೊಲ್ಕತ್ತಾ ನೈಟ್ ರೈಡರ್ಸ್‌ಗೆ 227 ರನ್‌ಗಳ ಕಠಿಣ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಕೊಲ್ಕತ್ತಾ ನೈಟ್ ರೈಡರ್ಸ್ 16 ಓವರ್‌ಗಳಲ್ಲಿ 161 ರನ್‌ಗಳಿಗೆ ಆಲ್‌ಔಟ್ ಆಯಿತು.

ಸನ್‌ ರೈಸರ್ಸ್ ಹೈದರಾಬಾದ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಸ್ ಹೆಡ್ ಜೋಡಿ 82 ರನ್‌ಗಳ ಜತೆಯಾಟವನ್ನಾಡುವ ಮೂಲಕ ಉತ್ತಮ ಆರಂಭ ಕಟ್ಟಿಕೊಟ್ಟರು. ಟ್ರಾವಿಸ್ ಹೆಡ್ 21 ಎಸೆತಗಳಲ್ಲಿ 46 ರನ್ ಚಚ್ಚಿದರೆ, ಅಭಿಷೇಕ್ ಶರ್ಮಾ 21 ಎಸೆತಗಳಲ್ಲಿ 48 ರನ್ ಬಾರಿಸಿದರು. ಇನ್ನುಳಿದಂತೆ ಇಶಾನ್ ಕಿಶನ್ 14 ರನ್ ಕಲೆಹಾಕಿ ಔಟ್ ಆದರೆ, ಅನಿಕೇತ್ ವರ್ಮಾ ಕೇವಲ 1 ರನ್ ಬಾರಿಸಿದರು. ಹೀಗೆ ಭರ್ಜರಿ ಆರಂಭ ಪಡೆದುಕೊಂಡಿದ್ದ ಸನ್‌ ರೈಸರ್ಸ್ 118 ರನ್‌ಗೆ 4 ವಿಕೆಟ್ ಕಳೆದುಕೊಂಡು ಮತ್ತೆ ಹಿನ್ನಡೆ ಅನುಭವಿಸಿತು. ನಂತರ ಐದನೇ ವಿಕೆಟ್‌ಗೆ ಜತೆಯಾದ ಹೆನ್‌ರಿಚ್ ಕ್ಲಾಸೆನ್ ಹಾಗೂ ನಿತಿಶ್ ಕುಮಾರ್ ರೆಡ್ಡಿ 82 ರನ್‌ಗಳ ಜತೆಯಾಟವನ್ನಾಡಿ ತಂಡದ ಮೊತ್ತವನ್ನು 200 ರನ್ ತಲುಪಿಸಿದರು. ನಿತಿಶ್ ಕುಮಾರ್ ರೆಡ್ಡಿ 39 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ಬೆನ್ನಲ್ಲೇ ಸಲಿಲ್ ಅರೋರಾ ಡಕ್‌ಔಟ್ ಆದರು. ಕ್ಲಾಸೆನ್ 35 ಎಸೆತಗಳಲ್ಲಿ 52 ರನ್ ಔಟ್ ಆದರೆ, ಶಿವಾಂಗ್ ಕುಮಾರ್ 4 ರನ್ ಹಾಗೂ ಹರ್ಷ್ ದುಬೆ ಅಜೇಯ 9 ರನ್ ಕಲೆಹಾಕಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೊಲ್ಕತ್ತಾ ನೈಟ್ ರೈಡರ್ಸ್ ಪರ ಬ್ಲೆಸಿಂಗ್ ಮುಜರ್‌ಬಾನಿ 4 ವಿಕೆಟ್, ವೈಭವ್ ಅರೋರಾ ಎರಡು ವಿಕೆಟ್, ಕಾರ್ತಿಕ್ ತ್ಯಾಗಿ ಹಾಗೂ ಅನುಕುಲ್ ರಾಯ್ ತಲಾ ಒಂದೊಂದು ವಿಕೆಟ್ ಪಡೆದರು.

ಕೊಲ್ಕತ್ತಾ ನೈಟ್ ರೈಡರ್ಸ್ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಫಿನ್ ಅಲೆನ್ 7 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಚಚ್ಚಿದರೆ, ನಾಯಕ ಅಜಿಂಕ್ಯ ರಹಾನೆ 8 ರನ್‌ಗೆ ವಿಕೆಟ್ ಒಪ್ಪಿಸಿದರು. ಬೆನ್ನಲ್ಲೇ ಕೆಮರಾನ್ ಗ್ರೀನ್ 2 ರನ್‌ ಗಳಿಸಿ ಔಟ್ ಆದರು. ಈ ಸಮಯದಲ್ಲಿ ಅಬ್ಬರಿಸಿದ ಅಂಗ್‌ಕ್ರಿಶ್ ರಘುವಂಶಿ 29 ಎಸೆತಗಳಲ್ಲಿ 52 ರನ್ ಬಾರಿಸಿದರು. ರಘುವಂಶಿ ವಿಕೆಟ್ ಬಿದ್ದ ಬೆನ್ನಲ್ಲೇ ಸಾಲು ಸಾಲಾಗಿ ವಿಕೆಟ್ ಬೀಳತೊಡಗಿದವು. ಅನುಕುಲ್ ರಾಯ್ ಡಕ್‌ಔಟ್ ಆದರೆ, ರಿಂಕು ಸಿಂಗ್ 35 ರನ್ ಕಲೆಹಾಕಿದರು. ಇನ್ನುಳಿದಂತೆ ರಮಣ್‌ದೀಪ್ ಸಿಂಗ್ 10, ಸುನಿಲ್ ನರೈನ್ 12, ಕಾರ್ತಿಕ್ ತ್ಯಾಗಿ 5, ವರುಣ್ ಚಕ್ರವರ್ತಿ ಡಕ್‌ಔಟ್ ಹಾಗೂ ವೈಭವ್ ಅರೋರಾ ಅಜೇಯ 1 ರನ್ ಕಲೆಹಾಕಿದರು.

ಸನ್ ರೈಸರ್ಸ್ ಹೈದರಾಬಾದ್ ಪರ ಜಯದೇವ್ ಉನಾದ್ಕತ್ ಮೂರು ವಿಕೆಟ್, ಇಶಾನ್ ಮಲಿಂಗಾ ಹಾಗೂ ನಿತಿಶ್ ಕುಮಾರ್ ರೆಡ್ಡಿ ತಲಾ ಎರಡು ವಿಕೆಟ್ ಮತ್ತು ಹರ್ಷ್ ದುಬೆ ಒಂದು ವಿಕೆಟ್ ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular