HomeLatest NewsIPL 2026: ನಾಳೆ ಆರ್​ಸಿಬಿ ಮೊದಲ ಪಂದ್ಯದ ಟಿಕೆಟ್ ಮಾರಾಟ: ಎಷ್ಟು ಗಂಟೆಗೆ, ಟಿಕೆಟ್ ಬೆಲೆ...

IPL 2026: ನಾಳೆ ಆರ್​ಸಿಬಿ ಮೊದಲ ಪಂದ್ಯದ ಟಿಕೆಟ್ ಮಾರಾಟ: ಎಷ್ಟು ಗಂಟೆಗೆ, ಟಿಕೆಟ್ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ

ಇದೇ ಮಾರ್ಚ್ 28ರಿಂದ ಬಹುನಿರೀಕ್ಷಿತ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.

ಕಳೆದ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದಿಂದಾಗಿ ಈ ಬಾರಿಯ ಟೂರ್ನಿಯಲ್ಲಿ ಚಿನ್ನಸ್ವಾಮಿಯಲ್ಲಿ ಪಂದ್ಯಗಳು ನಡೆಯುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಬಳಿಕ ಅನುಮತಿ ದೊರಕಿದ್ದು, ಟೂರ್ನಿಯ ಉದ್ಘಾಟನಾ ಪಂದ್ಯ ಅದೇ ಚಿನ್ನಸ್ವಾಮಿಯಲ್ಲಿ ನಡೆಯುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಪಾಲಿಗೆ ಸಂತಸವನ್ನು ತಂದಿದೆ. ಈ ಪಂದ್ಯದ ಟಿಕೆಟ್ ಮಾರಾಟ ಯಾವಾಗ ಆರಂಭವಾಗಲಿದೆ ಎಂದು ಕಾತರರಾಗಿ ಕಾಯುತ್ತಿದ್ದಾರೆ.

ಈ ಪಂದ್ಯದ ಟಿಕೆಟ್ ಮಾರಾಟ ನಾಳೆ ( ಮಾರ್ಚ್ 22 ) ಭಾನುವಾರ ಬೆಳಗ್ಗೆ 9.17ಕ್ಕೆ ಆರಂಭವಾಗಲಿದ್ದು, shop.royalchallengers.com ವೆಬ್ ಸೈಟ್ ನಲ್ಲಿ ಟಿಕೆಟ್ ಲಭ್ಯವಿರಲಿವೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಇನ್ನು ಯಾವ ಸ್ಟ್ಯಾಂಡ್ ಟಿಕೆಟ್ ಮೊತ್ತ ಎಷ್ಟು ರೂಪಾಯಿ ಎಂಬುದರ ಕುರಿತ ಮಾಹಿತಿ ಮುಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟ್ಯಾಂಡ್ ಹೆಸರು ಮತ್ತು ಪ್ರಾರಂಭಿಕ ಬೆಲೆ

ಸನ್ ಫಾರ್ಮಾ ಎ ಸ್ಟ್ಯಾಂಡ್ 2300

ಕನ್ಫರ್ಮ್ ಟಿಕೆಟ್ ಹೆಚ್ ಅಪ್ಪರ್ 3300

ಕನ್ಫರ್ಮ್ ಟಿಕೆಟ್ ಡಿ ಕಾರ್ಪೊರೇಟ್ 3300

ಪೂಮಾ ಶಾಂತಾ ರಂಗಸ್ವಾಮಿ ಸ್ಟ್ಯಾಂಡ್ 3300

ಬೋಟ್ ಸಿ ಸ್ಟ್ಯಾಂಡ್ 3300

ಇ ಸ್ಟ್ಯಾಂಡ್ 3300

ನಥಿಂಗ್ ಆರ್ ರಾಹುಲ್ ದ್ರಾವಿಡ್ ಪ್ಲಾಟಿನಂ ಲೌಂಜ್ 4000

ಜಾವಗಲ್ ಶ್ರೀನಾಥ್ ಸ್ಟ್ಯಾಂಡ್ ಪಿ1 ಅನೆಕ್ಸ್ 6000

ಬಿ ಕೆ ಟಿ ಟೈಯರ್ಸ್ ಇ ಎಕ್ಸಿಕ್ಯೂಟಿವ್ ಲೌಂಜ್ 10000

ಸನ್ ಫಾರ್ಮಾ ಗ್ರಾಂಡ್ ಟೆರೇಸ್ 10000

ಸನ್ ಫಾರ್ಮಾ ಬಿಎಸ್ ಚಂದ್ರಶೇಖರ್ ಸ್ಟ್ಯಾಂಡ್ ಪಿ ಟೆರೇಸ್ 15000

ಸೈಯದ್ ಕಿರ್ಮಾನಿ ಸ್ಟ್ಯಾಂಡ್ ಪಿ ಕಾರ್ಪೊರೇಟ್ 20000

ವೆಂಕಟೇಶ್ ಪ್ರಸಾದ್ ಸ್ಟ್ಯಾಂಡ್ ಪಿ4 25000

ವೆಂಕಟೇಶ್ ಪ್ರಸಾದ್ ಸ್ಟ್ಯಾಂಡ್ ಪಿ4 25000

ನಥಿಂಗ್ ಆರ್ ಜಿಆರ್ ವಿಶ್ವನಾಥ್ ಸ್ಟ್ಯಾಂಡ್ ಪಿ2 42000

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular