HomeLatest NewsIPL 2026: ಮೊದಲ ಪಂದ್ಯಕ್ಕಿಲ್ಲ 'ಅಭಿಮಾನಿಗಳ ಗಾಡ್ ಹೇಜಲ್‌ವುಡ್'; ಯಾರು ತುಂಬಲಿದ್ದಾರೆ ಆತನ ಸ್ಥಾನ? ಇಲ್ಲಿದೆ...

IPL 2026: ಮೊದಲ ಪಂದ್ಯಕ್ಕಿಲ್ಲ ‘ಅಭಿಮಾನಿಗಳ ಗಾಡ್ ಹೇಜಲ್‌ವುಡ್’; ಯಾರು ತುಂಬಲಿದ್ದಾರೆ ಆತನ ಸ್ಥಾನ? ಇಲ್ಲಿದೆ ಸಂಭಾವ್ಯ ಆಡುವ ಬಳಗ

ಇಂದು ( ಮಾರ್ಚ್ 28 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣ 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

ಸಂಜೆ 7.30ಕ್ಕೆ ಆರಂಭವಾಗಲಿರುವ ಈ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ದಕ್ಷಿಣದ ಮತ್ತೊಂದು ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಟ ನಡೆಸಲಿದೆ.

ಇನ್ನು ಎರಡೂ ತಂಡಗಳು ಪಂದ್ಯಕ್ಕಾಗಿ ಚಿನ್ನಸ್ವಾಮಿಯಲ್ಲಿ ತಾಲೀಮು ನಡೆಸುತ್ತಿದ್ದು, ಚಾಂಪಿಯನ್ಸ್ ಆರ್‌ಸಿಬಿ ಗೆಲುವಿನ ಮೂಲಕ ಶುಭಾರಂಭ ಮಾಡುವ ತವಕದಲ್ಲಿದೆ. ಇನ್ನು ಕಳೆದ ಟೂರ್ನಿಯಲ್ಲಿ ಕಣಕ್ಕಿಳಿದಿದ್ದ ಬಹುತೇಕ ಆಟಗಾರರು ತಂಡದಲ್ಲಿಯೇ ಇರುವುದರಿಂದ ಆರ್‌ಸಿಬಿ ಕಳೆದ ಬಾರಿಯಂತೆಯೇ ಬಲಿಷ್ಟವಾಗಿ ತೋರುತ್ತಿದೆ ಹಾಗೂ ಗೆಲ್ಲುವ ಫೇವರಿಟ್ ತಂಡ ಎಂದೂ ಸಹ ಕರೆಸಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆದರೆ ಟೂರ್ನಿಯ ಆರಂಭದ ಕೆಲವು ಪಂದ್ಯಗಳಿಗೆ ತಂಡದ ವೇಗಿ ಜೋಶ್ ಹೇಜಲ್‌ವುಡ್ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಬಂದಿದ್ದು, ಇಂದಿನ ಪಂದ್ಯದಲ್ಲಿಯೂ ಸಹ ಅವರು ಕಣಕ್ಕಿಳಿಯುವುದಿಲ್ಲ ಎನ್ನಲಾಗಿದೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಹೇಜಲ್‌ವುಡ್ ಇತ್ತೀಚೆಗಷ್ಟೆ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನೂ ಸಹ ಕೈತಪ್ಪಿಸಿಕೊಂಡಿದ್ದರು. ಸದ್ಯ ಚೇತರಿಸಿಕೊಂಡಿರುವ ಅವರು ಆರ್‌ಸಿಬಿ ಕ್ಯಾಂಪ್ ಸೇರಿದ್ದರೂ ಕಣಕ್ಕಿಳಿಯಲು ಕೆಲ ಸಮಯ ತೆಗೆದುಕೊಳ್ಳಲಿದ್ದಾರೆ.

ಹೀಗಾಗಿ ಇಂದಿನ ಪಂದ್ಯದಲ್ಲಿ ಹೇಜಲ್‌ವುಡ್ ಬದಲಿಗೆ ಯಾವ ವೇಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆ ಮೂಡಿದ್ದು, ಈ ಬಾರಿಯ ಮಿನಿ ಹರಾಜಿನಲ್ಲಿ ಆರ್‌ಸಿಬಿ ಖರೀದಿಸಿದ ವೇಗಿ ಜೇಕಬ್ ಡಫಿ ಆ ಸ್ಥಾನ ತುಂಬಲಿದ್ದಾರೆ.

ಇನ್ನು ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿಯುವ ಆರ್‌ಸಿಬಿ ಪರ ಆರಂಭಿಕರಾಗಿ ಯಶಸ್ವಿ ಜೋಡಿ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಿದರೆ, ಮೂರನೇ ಕ್ರಮಾಂಕದಲ್ಲಿ ವೆಂಕಟೇಶ್ ಐಯ್ಯರ್‌ ಆಡಲಿದ್ದಾರೆ. ನಾಯಕ ರಜತ್ ಪಟಿದಾರ್, ಜಿತೇಶ್ ಶರ್ಮಾ ಹಾಗೂ ಕೃನಾಲ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ಆಡಿದರೆ, ಟಿಮ್ ಡೇವಿಡ್ ಹಾಗೂ ರೊಮಾರಿಯೊ ಶೆಫರ್ಡ್ ಫಿನಿಷಿಂಗ್ ಕರ್ತವ್ಯ ನಿರ್ವಹಿಸಲಿದ್ದಾರೆ. ಬೌಲರ್‌ಗಳಾಗಿ ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್ ಹಾಗೂ ಜೇಕಬ್ ಡಫಿ ಆಡಲಿದ್ದು, ಇಂಪ್ಯಾಕ್ಟ್ ಪ್ಲೇಯರ್ ಆಗಿ ಮಂಗೇಶ್ ಯಾದವ್ ಕಣಕ್ಕಿಳಿಯಲಿದ್ದಾರೆ.

ಸನ್‌ ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಆಡುವ ಬಳಗ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ವೆಂಕಟೇಶ್ ಐಯರ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕ್ರುನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯೋ ಶೆಪರ್ಡ್, ಸುಯಶ್ ಶರ್ಮಾ, ಭುವನೇಶ್ವರ್ ಕುಮಾರ್, ಜೇಕಬ್ ಡಫಿ

ಇಂಪ್ಯಾಕ್ಟ್ ಪ್ಲೇಯರ್: ಮಂಗೇಶ್ ಯಾದವ್

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular